ಬೆಂಗಳೂರು: ಆಟೋಗಳ ನಕಲಿ ಪರವಾನಗಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಇಲಾಖಾಧಿಕಾರಿಗಳು ಪರವಾನಗಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಿದ್ದಾರೆ.
ಇದೀಗ ಒಂದೇ ಪರವಾನಿಗೆಯಲ್ಲಿ ನಗರದಲ್ಲಿ ಐದಾರು ಆಟೊಗಳು ಓಡಾಡುತ್ತಿವೆ. ಈ ಸಂಬಂಧ ಆಟೊ ಚಾಲಕರ ಸಂಘಟನೆಗಳು ದೂರು ನೀಡಿದ್ದವು. ತನಿಖೆ ಮಾಡಿದಾಗ ನಕಲಿ ಪರವಾನಗಿಗಳು ಪತ್ತೆಯಾಗಿವೆ.
ಅದರಿಂದಾಗಿ, ಈಗಾಗಲೇ ಪರವಾನಗಿ ಪಡೆದವರು ಹಾಗೂ ಪರವಾನಗಿ ನವೀಕರಣ ಮಾಡಿಸುವವರು ಆಧಾರ್ ಸಂಖ್ಯೆ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ.