News Karnataka Kannada
Monday, April 29 2024
ಬೆಂಗಳೂರು

ಬೆಂಗಳೂರು: ಖಾಸಗಿ ಸಂಸ್ಥೆಯ ಎಂಡಿ, ಸಿಇಒ ಜೋಡಿ ಕೊಲೆ

MD, CEO of a private firm shot dead
Photo Credit : G Mohan

ಬೆಂಗಳೂರು: ಹಾಡಹಗಲೇ ಕಂಪನಿಗೆ ನುಗ್ಗಿದ ದುಷ್ಕರ್ಮಿಗಳು ಖಾಸಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ಇಬ್ಬರನ್ನು ಜೋಡಿ ಕೊಲೆ ಮಾಡಿರುವ ದುರ್ಘಟನೆ ಅಮೃತಹಳ್ಳಿಯಲ್ಲಿ ನಡೆದಿದ್ದು ನಗರದ ಜನತೆ ಬೆಚ್ಚಿಬಿದ್ದಿದೆ.

ಅಮೃತಹಳ್ಳಿಯ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಫಣೀಂದ್ರ ಸುಬ್ರಮಣ್ಯ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ (ಸಿಇಒ) ವಿನು ಕುಮಾರ್ ಕೊಲೆಯಾದ ದುರ್ದೈವಿಗಳು.

ಕೊಲೆ ಆರೋಪಿ ಫೆಲಿಕ್ಸ್‌ ಎಂಬಾತ ಇಬ್ಬರನ್ನು ತಲ್ವಾರ್ ನಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗುತ್ತಿರುವ ಫೆಲಿಕ್ಸ್, ಏರೋನಿಕ್ಸ್ ಸಂಸ್ಥೆಯ ಹಳೆ ಉದ್ಯೋಗಿಯಾಗಿದ್ದನು. ಏರೋನಿಕ್ಸ್‌ ಕಂಪನಿಯನ್ನು ಬಿಟ್ಟುಹೋದ ನಂತರ ಆತನೇ ಸ್ವಂತ ಕಂಪನಿ ಸ್ಥಾಪಿಸಿದ್ದನು. ಆದರೆ, ತನ್ನ ಉದ್ಯಮಕ್ಕೆ ಪಣೀಂದ್ರ ಎದುರಾಳಿಯಾಗಿದ್ದ ಎಂದು ಭಾವಿಸಿದ್ದನು. ಇದರಿಂದಾಗಿ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಫಣೀಂದ್ರ ಸುಬ್ರಮಣ್ಯ ಕೊಲೆಗೆ ಸಂಚು ರೂಪಿಸಿ ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಏರೋನಿಕ್ಸ್‌ ಕಂಪನಿಗೆ ಎಂಟ್ರಿಕೊಟ್ಟ ಫೆನಿಕ್ಸ್‌ ತಲ್ವಾರ್ ಮತ್ತು ಚಾಕುವಿನಿಂದ ಪಣೀಂದ್ರ ಹಾಗೂ ವಿನುಕುಮಾರ್ ಮೇಲೆ ದಾಳಿ ಮಾಡಿದ್ದಾನೆ. ತನ್ನ ಸಂಚಿನಂತೆ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
31125

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು