ಆನೇಕಲ್: ತಾಲೂಕಿನಲ್ಲಿ ಸರಗಳ್ಳತನ ನಡೆಯುತ್ತಿದ್ದು, ಅತ್ತಿಬೆಲೆ, ಸೂರ್ಯನಗರ, ಜಿಗಣಿ, ಆನೇಕಲ್ ನಲ್ಲಿ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕಳ್ಳರು ಪಲ್ಸರ್ ಎನ್ ಎಸ್ ಬೈಕ್ನಲ್ಲಿ ಬಂದು ಮಹಿಳೆಯರ ಬಳಿ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದಾರೆ. ಜನನಿಬಿಡ ಪ್ರದೇಶದಲ್ಲೂ ಕತ್ತಿಗೆ ಕೈ ಹಾಕಿ ಸರ ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಜನರು ಬೆಚ್ಚಿಬಿದ್ದಿದ್ದು ಕಳ್ಳರನ್ನು ಹಿಡಿಯುವಂತೆ ಪಟ್ಟು ಹಿಡಿದಿದ್ದಾರೆ.
ಬ್ಲಾಕ್ ಆ್ಯಂಡ್ ರೆಡ್ ಪಲ್ಸರ್ ಬೈಕ್ ನಲ್ಲಿ ಬಂದು ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದಾರೆ. ಓರ್ವ ಹೆಲ್ಮೆಟ್ ಹಾಕಿದ್ರೆ ಮತ್ತೋರ್ವ ಮಂಕಿ ಕ್ಯಾಪ್ ಧರಿಸಿ ಕೃತ್ಯ ಎಸಗುತ್ತಿದ್ದಾರೆ. ಆರೋಪಿಗಳ ವಿರುದ್ಧ ನಾಲ್ಕು ಠಾಣೆಗಳಲ್ಲಿ ದೂರು ದಾಖಲಾಗಿದೆ. ಈ ಕೃತ್ಯ ಪೊಲೀಸರಿಗೆ ಸದ್ಯ ತಲೆನೋವಾಗಿ ಪರಿಣಮಿಸಿದೆ.