ಬೆಂಗಳೂರು : ಹಾಡುಹಗಲೇ  ನಗರದ ಶೇಷಾದ್ರಿ ಪುರಂನಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ  ಬರ್ಬರ ಹತ್ಯೆ ನಡೆದಿದ್ದು, ಇದೀಗ ಹಂತಕರಿಗಾಗಿ ಖಾಕಿ ಬಲೆ ಬೀಸಿದ್ದಾರೆ.ಅಜಿತ್ ಕುಮಾರ್‌ (27) ಕೊಲೆಯಾದವನು. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ,‘ಕೇಂದ್ರ ವಿಭಾಗದ ಡಿಸಿಪಿ ಶೇಖರ್, ‘ಮೃತ ಅಜಿತ್ ಕುಮಾರ್ ಎಂಬ 27 ವಯಸ್ಸಿನ ವ್ಯಕ್ತಿಯ ಕೊಲೆ ನಡೆದಿದೆ. ಈತ ಕೊಲೆ ಪ್ರಕರಣದ ಆರೋಪಿಯಾಗಿದ್ದು, 2022ರಲ್ಲಿ ಕೊಲೆ ಕೇಸ್​ನಲ್ಲಿ ಜೈಲಿಗೆ ಹೋಗಿದ್ದ. ಅದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬ್ಲಡ್ ಬ್ಯಾಂಕ್​ವೊಂದರಲ್ಲಿ ಇತ ಕೆಲಸ ಮಾಡ್ತಿದ್ದ. ಸದ್ಯ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

ಇನ್ನು ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಶೇಷಾದ್ರಿಪುರ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದ ಅಜಿತ್, ಇಂದು(ಗುರುವಾರ) ಮಧ್ಯಾಹ್ನ 4:15 ರ ವೇಳೆಗೆ ಮನೆಯಿಂದ ಊಟ ಮುಗಿಸಿ ಹೊರಬಂದಿದ್ದ. ಈ ವೇಳೆ ಅಟ್ಯಾಕ್ ಮಾಡಿರುವ ಹಂತಕರ ಗ್ಯಾಂಗ್, ಮಾರಕಾಸ್ತ್ರ ಬೀಸಿದ ರಭಸಕ್ಕೆ ಅಜಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಧ್ಯ ಮೃತದೇಹ ಮರಣೋತ್ತರ ಪರೀಕ್ಷೆಗೆ ಬೋರಿಂಗ್​ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.