ದೇವನಹಳ್ಳಿ: ಟೋಕಿಯೋ ಮತ್ತು ಬೆಂಗಳೂರು ಮಾರ್ಗದಲ್ಲಿ ಇನ್ನಷ್ಟು ವಿಮಾನಗಳನ್ನು ಹೆಚ್ಚಿಸುವುದಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್‌) ಹಾಗೂ ಜಪಾನ್‌ ಏರ್‌ಲೈನ್ಸ್‌ ಘೋಷಿಸಿದೆ. ಜಪಾನ್‌ ರಾಜಧಾನಿ ಟೋಕಿಯೋದಿಂದ ಬೆಂಗಳೂರಿಗೆ ವಾರದಲ್ಲಿ ಮೂರು ದಿನ ಪ್ರಯಾಣಿಸುತ್ತಿರುವ ಜಪಾನ್ ಏರ್‌ಲೈನ್ಸ್‌ ವಿಮಾನವು ಅಕ್ಟೋಬರ್‌ ಕೊನೆಯ ವಾರದಿಂದ 5 ದಿನ ಸಂಚರಿಸಲಿದೆ.

ಟೋಕಿಯೋ, ಬೆಂಗಳೂರು ನಡುವೆ ಪ್ರಸ್ತುತ ವಾರಕ್ಕೆ ಮೂರು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದು ಪ್ರಯಾಣಿಕರ ಒತ್ತಡದಿಂದ ಅಕ್ಟೋಬರ್‌ ಕೊನೆಯ ವಾರದಿಂದ ಐದು ವಿಮಾನಗಳು ಹಾರಾಟ ನಡೆಸಲಿವೆ. 2022ರಲ್ಲಿ 23,532 ಹಾಗೂ 2023ರಲ್ಲಿ 62,959 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಬಿಐಎಎಲ್‌ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್‌ ತಿಳಿಸಿದ್ದಾರೆ.