ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (KIAB/BLR ವಿಮಾನ ನಿಲ್ದಾಣ) ಮಾವು ರಫ್ತಿನಲ್ಲಿ ಗಮನಾರ್ಹ ಸಾಧನೆ ಮಾಡಿದೆ. 2024ನೇ ಸಾಲಿನಲ್ಲಿ 822 ಮೆಟ್ರಿಕ್ ಟನ್ ಮಾವಿನ ಹಣ್ಣಿನ ಸಾಗಾಟಣೆ ಮಾಡುವ ಮೂಲಕ ಈ ಬಾರಿ ಶೇ. 20 ರಷ್ಟು ಬೆಳವಣಿಗೆ ಕಂಡಿದೆ. 2024ನೇ ಸಾಲಿನಲ್ಲಿ 822 ಮೆಟ್ರಿಕ್ ಟನ್ ಮಾವಿನ ಹಣ್ಣಿನ ಸಾಗಾಟಣೆ ಮಾಡುವ ಮೂಲಕ ಈ ಬಾರಿ ಶೇ. 20 ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದಲ್ಲಿ 685 ಎಟ್ರಿಕ್ ಟನ್ ಮಾವಿನಹಣ್ಣನ್ನು ರಫ್ತು ಮಾಡಲಾಗಿತ್ತು. ಈ ಬಾರಿ ಒಟ್ಟು 27 ಲಕ್ಷ ಮಾವಿನ ಹಣ್ಣನ್ನು ರಫ್ತು ಮಾಡುವ ಮೂಲಕ ಹಿಂದಿನ ಋತುವಿಗೆ ಹೋಲಿಸಿದರೆ ಶೇ.59ರಷ್ಟು ಹೆಚ್ಚಳ ಕಂಡಿದೆ, ಸಾಗರೋತ್ತರ ಮಾರುಕಟ್ಟೆಗಳಲ್ಲಿ ಭಾರತೀಯ ಮಾವಿನಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ನ (ಬಿಐಎಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, “ಬಿಎಲ್ಆರ್ ಏರ್ಪೋರ್ಟ್, ತಾಂತ್ರಿಕವಾಗಿ ಸುಧಾರಿತ ಕೋಲ್ಡ್ ಸ್ಟೋರೇಜ್ ಸೌಲಭ್ಯವಾದ ಡಬ್ಲ್ಯುಎಫ್ಎಸ್ ಬಿಎಲ್ಆರ್ ಕೂಲ್ಪೋರ್ಟ್ ಪೂರೈಕೆಯು ಪೆರಿಷಬಲ್ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

