ಬೆಂಗಳೂರು:  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆ್ಯಂಥಮ್ ಸಾಂಗ್ ಬಿಡುಗಡೆಯಾಗಿದೆ.ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2 ತನ್ನ ವಿಶಿಷ್ಟ ಸೇವೆ ಮತ್ತು ಸೌಂದರ್ಯದಿಂದ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಚಾಲ್ತಿಯಲ್ಲಿರುವ ಸೇವಗಳು ಮತ್ತು ಗಾರ್ಡನ್ ಟರ್ಮಿನಲ್​ನ ಸೌಂದರ್ಯವನ್ನ 2 ನಿಮಿಷ 30 ಸೆಕೆಂಡ್​​ಗಳ ವಿಡಿಯೋದಲ್ಲಿ ಚಿತ್ರಿಕರಿಸಿದ್ದು, ಹೊಸ ಹಾಡನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಜಪ್ರಿಯತೆ ಗಳಿಸಿರುವ ಪ್ರಸಿದ್ಧ ಗಾಯಕ ರಿಕಿ ಕೇಜ್ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆ್ಯಂಥಮ್ ಹಾಡನ್ನ ಹಾಡಿದ್ದಾರೆ. ಸ್ವತಃ ರಿಕಿ ಕೇಜ್ ಅವರೇ ಹಾಡನ್ನ ಬಿಡುಗಡೆ ಮಾಡಿದರು. ಹಾಡಿಗೆ ಪ್ರಯಾಣಿಕರು ಫುಲ್ ಫಿದಾ ಆಗಿದ್ದಾರೆ.