News Karnataka Kannada
Wednesday, May 08 2024
ಬೆಂಗಳೂರು

ಎಪಿಡಿಯಿಂದ ಅಂತಾರಾಷ್ಟ್ರೀಯ ವಿಶಿಷ್ಟ ಚೇತನರ ದಿನಾಚರಣೆ

New Project (5)
Photo Credit : News Kannada

ಬೆಂಗಳೂರು:  ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ  ಇಂದು(ಡಿ.0) ಬೆಂಗಳೂರಿನ ಕಬ್ಬನ್ ಪಾರ್ಕ್ ನ ಬಾಲಭವನದಲ್ಲಿ ಅಂತಾರಾಷ್ಟ್ರೀಯ ವಿಶಿಷ್ಟ ಚೇತನರ ದಿನಾಚರಣೆಯನ್ನು ವಿಶೇಷವಾಗಿ ಆಯೋಜಿಸಿತ್ತು. ಸಂಸ್ಥೆಯ ‘Yes to Access’ ಯೋಜನೆಯ ಭಾಗವಾಗಿ ವಿಶಿಷ್ಟ ಚೇತನರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಯೋಜನೆಯ ಭಾಗವಾಗಿ ವಿಶಿಷ್ಟ ಚೇತನರಿಗೆ ಬೆಂಬಲವಾಗಿ ನಿಲ್ಲುವ ಪ್ರತಿಜ್ಞೆ ಕೈಗೊಳ್ಳಲಾಯಿತು.

ಶಿಕ್ಷಣ, ಉದ್ಯೋಗ, ಸಮಾನ ಅವಕಾಶಗಳು ಮತ್ತು ತೊಂದರೆಮುಕ್ತ ಜಗತ್ತಿಗೆ ವಿಶಿಷ್ಟ ಚೇತನರನ್ನು ಒಡ್ಡಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಇಂಟಗ್ರೇಟೆಡ್ ಶಾಲೆಯ ವಿದ್ಯಾರ್ಥಿಗಳು, ಎಪಿಡಿ ಫಲಾನುಭವಿಗಳು ತಮ್ಮ ಅದ್ಭುತ ಪ್ರದರ್ಶನವನ್ನು ನೀಡಿದರು.

ಎಚ್ ಸಿಎಲ್ ಫೌಂಡೇಶನ್ ನ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ಚೇತನಾ ತೀರ್ಥಹಳ್ಳಿ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮಕ್ಕೆ ಮೆರಗು ತಂದರು. ಇದೇ ವೇಳೆ, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಮತ್ತು ವಿಧಾನಪರಿಷತ್ತಿನ ಮಾಜಿ ಸದಸ್ಯೆ ತಾರ, ಲೇಖಕ ಮತ್ತು ನಿರ್ದೇಶಕ ಗುರುರಾಜ್ ಕುಲಕರ್ಣಿ ನಾಡಗೌಡ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವೇಳೆ ಮಾತನಾಡಿದ ಡಾ.ಚೇತನಾ, ವಿಶಿಷ್ಟ ಚೇತನ ವ್ಯಕ್ತಿಗಳಿಗೆ ಸುದ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಕಾರ ಅತ್ಯಗತ್ಉವಾಗಿದೆ. ಈ ದಿಸೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

“ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ವಿಶಿಷ್ಟ ಚೇತನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತಮಗೊಳಿಸುವುದು ಅಗತ್ಯವಾಗಿದೆ. ಅಂಗವೈಕಲ್ಯದ ಅನುಭವವು ಜೀವನದಲ್ಲಿ ಸಾರ್ವತ್ರಿಕವಾಗಿದೆ ಮತ್ತು ಮಾನವ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಇದು ಪರಿಣಾಮ ಬೀರಯತ್ತದೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನಕ್ಕೆ ಒತ್ತು ನೀಡಬೇಕಿದೆ. ಈ ಮೂಲಕ ವಿಶಿಷ್ಟ ಚೇತನರನ್ನು ಎಲ್ಲಾ ರೀತಿಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ” ಎಂದರು.

ಇನ್ನು ಈ‌ ಕಾರ್ಯಕ್ರಮದ ಕುರಿತು ಮಾತನಾಡಿದ ನಟಿ ತಾರಾ ಅವರು “ಈ ಮಕ್ಕಳು ದೇವರಿದ್ದಂತೆ. ಇವರಿಗೆ ವಿದ್ಯೆ ಹೇಳಿ ಕೊಡುವ ಶಿಕ್ಷಕ ಶಿಕ್ಷಕಿಯರ ತಾಳ್ಮೆಗೆ ನನ್ನ ದೊಡ್ಡ ನಮನ.ಪ್ರಾಥಮಿಕ ಶಿಕ್ಷಣ ಅದು ಪಿಎಚ್ ಡಿಗಿಂತ ದೊಡ್ಡದು. ಯಾಕೆಂದರೆ ಮಕ್ಕಳ‌ ಭವಿಷ್ಯಕ್ಕೆ ಒಂದು ಅಡಿಪಾಯ ಹಾಕುವುದು ಅದುವೇ ಪ್ರಾಥಮಿಕ ಶಿಕ್ಷಣ.ಮಕ್ಕಳಿಗೆ ಇದೊಂದು‌‌ ಒಳ್ಳೆಯ ಕಾರ್ಯಕ್ರಮ” ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ ಸಿಇಒ ಡಾ.ಸೆಂಥಿಲ್ ಎನ್ಎಸ್ ಕುಮಾರ್ ಅವರು ಮಾತನಾಡಿ, “ಭಾರತದಲ್ಲಿ 22 ಕೋಟಿಗೂ ಅಧಿಕ ಜನರು ವಿಶಿಷ್ಟ ಚೇತನರಿದ್ದಾರೆ. ಇವರಿಗೆ ಹೆಚ್ಚು ಅಂತರ್ಗತ ಮತ್ತು ತಡೆಮುಕ್ತ ಪರಿಸರಕ್ಕೆ ಪ್ರವೇಶ ಒದಗಿಸುವುದರಿಂದ ಸಮಾಜದಲ್ಲಿ ಉತ್ತಮ ಜೀವನ ಸಾಗಿಸುತ್ತಾರೆ ಮತ್ತು ಗೌರವ ಹೆಚ್ಚುತ್ತದೆ” ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು