ಬೆಂಗಳೂರು: ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮತ್ತು ಸಿಂಗಾಪುರ ನಡುವೆ ತಡೆರಹಿತ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಹೊಸ ಸೇವೆಯು ಬೆಂಗಳೂರು ಹಾಗೂ ಸಿಂಗಾಪುರ ನಡುವೆ ನೇರ ಸಂಪರ್ಕ ಹೊಂದಿದೆ. ಇದರಿಂದ ಅಂತರವೂ ಕಡಿಮೆಯಾಗಿದೆ.
ಏರ್ ಇಂಡಿಯಾದ AI392 ಎಂಬ ಹೊಸ ವಿಮಾನವು ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹಾರಾಟ ಆರಂಭಿಸಲಿದೆ. ಮರುದಿನ ಬೆಳಗ್ಗೆ 5.30ಕ್ಕೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ರಿಟರ್ನ್ ಫ್ಲೈಟ್ AI393 ವಿಮಾನ ಸಿಂಗಾಪುರದಿಂದ ಬೆಳಿಗ್ಗೆ 6. 40 ಕ್ಕೆ ಹೊರಟು ರಾತ್ರಿ 8.35 ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದೆ.
ಏರ್ ಇಂಡಿಯಾ ಮುಂಬೈನಿಂದ ಸಿಂಗಾಪುರಕ್ಕೆ ವಾರಕ್ಕೆ ಏಳು ವಿಮಾನಗಳಿಂದ ವಾರಕ್ಕೆ 13 ವಿಮಾನಗಳಿಗೆ ಹೆಚ್ಚಿಸುವುದಾಗಿ ಘೋಷಿಸಿತು. ಭಾನುವಾರದಿಂದ ಅದು ಪ್ರಾರಂಭವಾಗಲಿದೆ. ಏರ್ ಇಂಡಿಯಾ ಪ್ರಸ್ತುತ ದೆಹಲಿಯಿಂದ (14 ವಿಮಾನಗಳು), ಮುಂಬೈ (13 ವಿಮಾನಗಳು), ಚೆನ್ನೈ (7 ವಿಮಾನಗಳು) ಮತ್ತು ಬೆಂಗಳೂರು (4 ವಿಮಾನಗಳು) ಮೆರ್ಲಿಯನ್ ಸಿಟಿಯನ್ನು ಸಂಪರ್ಕಿಸುವ ಮೂಲಕ ಸಿಂಗಾಪುರಕ್ಕೆ ವಾರಕ್ಕೆ ಒಟ್ಟು 38 ತಡೆರಹಿತ ವಿಮಾನಗಳು ಹಾರಾಡುತ್ತಿವೆ.
ಏರ್ ಇಂಡಿಯಾದ ವೆಬ್ಸೈಟ್: (www.airindia.com), ಮೊಬೈಲ್ ಅಪ್ಲಿಕೇಶನ್ ಮತ್ತು ಟ್ರಾವೆಲ್ ಏಜೆಂಟ್ಗಳ ಮೂಲಕ (ಆನ್ಲೈನ್ ಟ್ರಾವೆಲ್ ಏಜೆಂಟ್ಗಳನ್ನು ಒಳಗೊಂಡಂತೆ) ಸೇರಿದಂತೆ ಎಲ್ಲಾ ರೀತಿಯಲ್ಲೂ ವಿಮಾನಗಳ ಬುಕಿಂಗ್ ಮಾಡಬಹುದು ಎಂದು ಏರ್ಲೈನ್ ಪ್ರಕಟಣೆಯಲ್ಲಿ ತಿಳಿಸಿದೆ.