ಬೆಂಗಳೂರು : ಏರ್ ಇಂಡಿಯಾ ವಿಮಾನದ ಪೈಲಟ್ ಓರ್ವ ಕುಸಿದು ಬಿದ್ದು ವಿಮಾನ ಹಾರಾಟ ವಿಳಂಬವಾದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜುಲೈ 4ರಂದು ಬೆಳಗ್ಗೆ ಬೆಂಗಳೂರಿನ ಕೆಐಎಎಲ್‌ನಿಂದ ದೆಹಲಿಗೆ ಹೊರಡಬೇಕಿದ್ದ ವಿಮಾನದಲ್ಲಿ ಪೈಲಟ್ ಕುಸಿದು ಬಿದ್ದಿದ್ದಾರೆ. ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ AI2414ನ ಕಾಕ್‌ಪಿಟ್‌ನಲ್ಲಿ ಪೈಲಟ್ ದಿಢೀರನೆ ಕುಸಿದು ಬಿದ್ದ ಪರಿಣಾಮ ವಿಮಾನದ ಟೇಕ್‌ಆಫ್ ವಿಳಂಬವಾಗಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ವಿಮಾನ ಟೇಕ್ ಆಫ್‌ಗೂ ಮುನ್ನವೇ ಪೈಲಟ್ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಿದ್ದರೂ ಆತ ವಿಮಾನದ ಕಾಕ್‌ಪಿಟ್ ತಲುಪಿ ವಿಮಾನ ಹಾರಿಸುವ ಯತ್ನ ಮಾಡಲು ಮುಂದಾಗಿದ್ದಾರೆ. ಆದರೆ ವಿಮಾನ ಹಾರಾಟ ಪ್ರಾರಂಭಿಸುವ ಮೊದಲೇ ಇದ್ದಕ್ಕಿದ್ದಂತೆ ಆತ ಕಾಕ್‌ಪಿಟ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಇದರಿಂದ ನಡೆಯಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ. ಕುಸಿದುಬಿದ್ದ ಪೈಲಟ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

