ಬೆಂಗಳೂರು: ವ್ಯಕ್ತಿಯೊಬ್ಬ ಮೆಟ್ರೋ ಟ್ರ್ಯಾಕ್​​ಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರದ ಹೊಸಳ್ಳಿಯಲ್ಲಿ ನಿನ್ನೆ ರಾತ್ರಿ ಸುಮಾರು 8:50ರ ಸಮಯಕ್ಕೆ ನಡೆದಿದೆ.

ಎಂದಿನಂತೆ ಮೆಟ್ರೋ ಸಂಚಾರವಿತ್ತು. ಇನ್ನೇನು ಮೆಟ್ರೋ ಟ್ರೈನ್ ಬರುತ್ತಿದ್ದಂತೆ ಯುವಕನೊಬ್ಬ ಹಳಿ ಕಡೆಗೆ ಹಾರಿ ಬಿಟ್ಟಿದ್ದನು. ಇದನ್ನ ಗಮನಿಸಿದ ಸಿಬ್ಬಂದಿ ತಕ್ಷಣ ಪವರ್ ಆಫ್ ಮಾಡಿದ್ದಾರೆ. ತಕ್ಷಣ ಹಳಿಗೆ ಇಳಿದ ಸಿಬ್ಬಂದಿ ಯುವಕನನ್ನ ಮೇಲಕ್ಕೆತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನ ಹೆಸರು ಸಾಗರ್ ಸುಮಾರು 34 ವರ್ಷ ಇಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ. ಆದರೆ ಸ್ವಲ್ಪ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದನು.

ಖಿನ್ನತೆಯಿಂದ ಹೊರಬರಲು ಫುಟ್​ಬಾಲ್ ಆಡುತ್ತಿದ್ದನು. ಆದರೆ ನಿನ್ನೆ ರಾತ್ರಿ ಮನೆಯಲ್ಲೇ ಮೊಬೈಲ್, ಪರ್ಸ್ ಎಲ್ಲವನ್ನೂ ಬಿಟ್ಟು ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ತಲೆಭಾಗಕ್ಕೆ ಸ್ವಲ್ಪ ಪ್ರಮಾಣದ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯಿಂದ 40 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು.