ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರೈಲ್ವೆ ಸ್ಟೇಷನ್ನಲ್ಲಿ ರೈಲಿನಲ್ಲಿ ಸೀಟಿನಲ್ಲಿ ಕೂರುವ ವಿಚಾರದಲ್ಲಿ ಗಲಾಟೆಯಾಗಿ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಗಂಗಾಧರ್ ಹಾಗೂ ಯೋಗೇಶ್ಗೆ ಹಲ್ಲೆಗೊಳಗಾದವರು. ಇವರನ್ನು ನೆಲಮಂಗಲ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಯಶವಂತಪುರದಿಂದ ಬೆಂಗಳೂರು-ಹಾಸನ ಮಾರ್ಗದ ರೈಲಿನಲ್ಲಿ ಗಂಗಾಧರ್ ಹಾಗೂ ಯೋಗೇಶ್ ಬಂದಿದ್ದರು. ಈ ವೇಳೆ ಪೋನ್ ಕರೆಗೆ ನೆಟ್ವರ್ಕ್ ಸಮಸ್ಯೆ ಇದ್ದ ಕಾರಣಕ್ಕೆ ಕುಳಿತಿದ್ದ ಸೀಟ್ ನೋಡಿಕೊಳ್ಳಲು ಸ್ನೇಹಿತ ಯೋಗೇಶ್ಗೆ ತಿಳಿಸಿ ಗಂಗಾಧರ್ ಡೋರ್ ಬಳಿ ಹೋಗಿದ್ದಾರೆ.
ರೈಲು ನೆಲಮಂಗಲ ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಸೀಟ್ನಲ್ಲಿ ಕೂರಲು ಯತ್ನಿಸಿದ್ದ. ಈ ಕುರಿತು ಪ್ರಶ್ನೆ ಮಾಡಿದ್ದಕ್ಕೆ ತರಕಾರಿ ಕೊಯ್ಯುವ ಚಾಕುವಿನಿಂದ ಹಲ್ಲೆ ನಡೆಸಿ ರೈಲಿನಿಂದ ಪರಾರಿಯಾಗಿದ್ದಾನೆ.
ಚಾಕು ಇರಿದು ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

