News Karnataka Kannada
Monday, April 29 2024
ಬೆಂಗಳೂರು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಸ ಅತಿಥಿಯ ಎಂಟ್ರಿ

Zibra
Photo Credit : News Kannada

ಆನೇಕಲ್: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ವನ್ಯ ಜೀವಿಗಳ ತಾಣವಾಗಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ಇದೀಗ ಪಾರ್ಕ್‌ಗೆ ಮತ್ತೋರ್ವ ಹೊಸ ಅತಿಥಿ ಆಗಮನವಾಗಿದ್ದು, ಪ್ರಾಣಿ ಪ್ರಿಯರನ್ನು ಮತ್ತಷ್ಟು ಆಕರ್ಷಣೆಗೊಳಿಸುತ್ತಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಕಬಿನಿ ಹಾಗೂ ಹರಿಶ್ಚಂದ್ರ ದಂಪತಿಗೆ ಮರಿ ಜನಿಸಿದೆ. ಸುಮಾರು ಮೂರರಿಂದ ನಾಲ್ಕು ವರ್ಷ ವಯಸ್ಸಿನ ತಾಯಿ ಕಬಿನಿ ಮೊದಲ ಬಾರಿಗೆ ಗರ್ಭಧರಿಸಿ ಮುದ್ದಾದ ಮರಿ ಜೀಬ್ರಾಗೆ ಜನ್ಮ ನೀಡಿದ್ದು, ಮರಿ ಜೀಬ್ರಾ ಸೇರ್ಪಡೆಯೊಂದಿಗೆ, ಮೃಗಾಲಯದಲ್ಲಿ ಒಟ್ಟು ಜೀಬ್ರಾಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ತಾಯಿ ಮತ್ತು ಮರಿ ಜೀಬ್ರಾ ಎರಡೂ ಆರೋಗ್ಯಕರವಾಗಿದ್ದು, ಪಾರ್ಕ್‌ನ ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರು ಹೆಚ್ಚಿನ ಆರೈಕೆಯಿಂದ ನೋಡಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವೇ ದಿನಗಳಲ್ಲಿ ಪಾರ್ಕ್‌ನಲ್ಲಿ ತಾಯಿ ಜೀಬ್ರಾದೊಂದಿಗೆ ಮರಿ ಜೀಬ್ರಾವನ್ನು ಪ್ರವಾಸಿಗರು ಕಾಣಬಹುದಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ತಿಳಿಸಿದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು