News Karnataka Kannada
Tuesday, April 30 2024
ಬೆಂಗಳೂರು

7 ವರ್ಷಗಳಿಂದ ಕೋಮಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಸಾವು

Untitled 101
Photo Credit :

ಬೆಂಗಳೂರು: ನಗರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 7 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ನವದೆಹಲಿ ಮೂಲದ ಮಹಿಳೆ ಮೇ 24ರಂದು ಕೋಮಾ ಸ್ಥಿತಿಯಲ್ಲಿರುವಾಗಲೇ ಮೃತಪಟ್ಟಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಉದ್ಯೋಗಿಯಾಗಿದ್ದ ಪೂನಮ್‌ ಮೃತ ಮಹಿಳೆ(35). ಈಕೆ 7 ವರ್ಷಗಳ ಹಿಂದೆ ಹೊಟ್ಟೆ ನೋವಿನಿಂದಾಗಿ 2014ರಲ್ಲಿ ನಗರ ಆಸ್ಪತ್ರೆಯ ಎಂಐಸಿಯುಗೆ ದಾಖಲಾಗಿದ್ದರು.

ಕಳೆದ 7 ವರ್ಷದಿಂದ ವಿವಿಧ ರೀತಿ ಚಿಕಿತ್ಸೆ ಹಾಗೂ ಆರೈಕೆಗೆ ಒಳಗಾಗಿದ್ದರು. ಪ್ರಾರಂಭದಲ್ಲಿ ಸಾಮಾನ್ಯ ಪ್ರಕರಣ ವೆಂದು ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅನಂತರ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಸುದೀರ್ಘ‌ ಅವಧಿಯಲ್ಲಿ ಚಿಕಿತ್ಸೆಗೆ ಬರೋಬ್ಬರಿ 9.5 ಕೋಟಿ ರೂ. ಬಿಲ್‌ ಆಗಿದ್ದು, ಈ ಪೈಕಿ 2 ಕೋಟಿ ರೂ. ಪಾವತಿಸಲಾಗಿದೆ ಎಂದು ಪೂನಮ್‌ ಪತಿ ರಾಜೇಶ್‌ ನಾಯರ್ ತಿಳಿಸಿದರು.

ಕೇರಳ ಮೂಲದ ರಾಜೇಶ್‌ ನಾಯರ್‌ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಜೇಶ್‌ ದಂಪತಿಗಳಿಗೆ ಮಕ್ಕಳು ಇರಲಿಲ್ಲ. ಈ ಹಿಂದೆ ಮುಂಬೈ ಆಸ್ಪತ್ರೆಯಲ್ಲಿ 42 ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿ ದಾಖಲಾಗಿದ್ದ ಅರುಣಾ ಶಾನ್‌ ಬಾಗ್‌ ಬಳಿಕ ದೀರ್ಘ‌ ಅವಧಿಯ ಕಾಲ ಆಸ್ಪತ್ರೆಯಲ್ಲಿ ದಾಖಲಾದ 2ನೇ ಪ್ರಕರಣ ಪೂನಮ್‌ ಅವರದ್ದು. ‌

2014ರಲ್ಲಿ ಪೂನಮ್‌ ಅವರು ಎಂಐಸಿಯುಗೆ ದಾಖಲಾಗಿದ್ದರು. ಇದುವರೆಗೆ ವಿವಿಧ ಚಿಕಿತ್ಸೆ ಹಾಗೂ ಆರೈಕೆಗೆ ಒಳಗಾಗಿದ್ದರು. ಇದೆಲ್ಲರ ನಡುವೆ ಮೇ 24ರ ಮಧ್ಯರಾತ್ರಿ ಮೃತಪಟ್ಟಿದ್ದಾರೆ ಎಂದು ನಗರ ಪ್ರತಿಷ್ಠಿತ ಆಸ್ಪತ್ರೆ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು