ಬೆಂಗಳೂರು: ಈರೋಡ್ನಲ್ಲಿ ಇಬ್ಬರು ಯುವಕರು ಸಿಕ್ಕಿಬಿದ್ದ ಕೇವಲ ಹದಿನೈದು ದಿನಗಳ ನಂತರ, ಕಾಕಿನಾಡ ಎಕ್ಸ್ಪ್ರೆಸ್ನಲ್ಲಿ ಸಹಾಯಕ ಲೋಕೊ ಪೈಲಟ್(ALP) ಎಂದು ಹೇಳಿಕೊಳ್ಳುತ್ತಿದ್ದ 35 ವರ್ಷದ ವ್ಯಕ್ತಿ, ನಕಲಿ ಲೋಕೋ ಪೈಲಟ್ ನನ್ನು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಎರಡೂ ಈ ವ್ಯಕ್ತಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿವೆ. ಕಾಕಿನಾಡ ಎಕ್ಸ್ಪ್ರೆಸ್ನಲ್ಲಿ ಎಎಲ್ಪಿಯ ಅನುಮಾನಾಸ್ಪದ ನಡವಳಿಕೆಯ ಬಗ್ಗೆ ಲೋಕೊ ಪೈಲಟ್ ನೀಡಿದ ಮಾಹಿತಿಯ ನಂತರ ನಕಲಿ ಲೋಕೊ ಪೈಲಟ್ ಲಕ್ಷ್ಮಿನಾರಾಯಣ ಬಿಎಸ್ ನನ್ನು ಬಂಧಿಸಲಾಯಿತು.
“ತಾನು ದಕ್ಷಿಣ ಮಧ್ಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಲಕ್ಷ್ಮಿನಾರಾಯಣ ಹೇಳಿಕೊಂಡಿದ್ದು, ಆತನ ನಿಜವಾದ ಗುರುತು ಪತ್ತೆ ಹಚ್ಚಲು ಬೆಂಗಳೂರಿನಲ್ಲಿರುವ ಆತನ ಹೆತ್ತವರನ್ನು ಠಾಣೆಗೆ ಕರೆಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.