ಬೆಂಗಳೂರು: ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದ ಆರು ನಕ್ಸಲರನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ನಕ್ಸಲರ ವಿಚಾರಣೆ ಆರಂಭವಾಗಲಿದೆ.

ಆರು ಜನ ನಕ್ಸಲರನ್ನು ಪೊಲೀಸರ ವಶಕ್ಕೆ ನೀಡಿದ ಎನ್ ಐ ಎ ಕೋರ್ಟ್ ಹದಿನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಹಾಗಾಗಿ ಇಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ನಕ್ಸಲರ ವಿಚಾರಣೆ ನಡೆಯಲಿದೆ. ಚಿಕ್ಕಮಂಗಳೂರು ಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

ಇನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿದ ಬೆನ್ನಲ್ಲೇ ನಿನ್ನೆ ರಾತ್ರಿ ಚಿಕ್ಕಮಗಳೂರಿಗೆ ಕರೆತಂದಿರುವ ಪೊಲೀಸರು ಇಂದಿನಿಂದ ವಿಚಾರಣೆ ನಡೆಸಲಿದ್ದಾರೆ. ಆರು ಜನ ನಕ್ಸಲರ ಪೈಕಿ ನಾಲ್ವರ ವಿರುದ್ಧ ವಿವಿಧ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಜಯಣ್ಣ ಮೇಲೆ ವಿವಿಧ ಠಾಣೆಯಲ್ಲಿ ಕೇಸ್ ದಾಖಲಾಗಿರುವ ಹಿನ್ನಲೆ ನಕ್ಸಲರನ್ನು ಕಸ್ಟಡಿಗೆ ಪಡೆಯಲಾಗಿದೆ.