ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಪಲ್ಲಕ್ಕಿ, ಹವಾನಿಯಂತ್ರಿತ ಬಸ್ ಸೇರಿ ಒಟ್ಟು 408 ಬಸ್ಗಳನ್ನು ಖರೀದಿಸಲಾಗುತ್ತಿದ್ದು ಶೀಘ್ರದಲ್ಲೇ ಸಾರಿಗೆ ನಿಗಮಗಳಿಗೆ 408 ಬಸ್ಗಳ ಸೇರ್ಪಡೆಯಾಗಲಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಇದರಿಂದಾಗಿ ಈಗಿನ ಪರಿಸ್ಥಿತಿಯನ್ನು ಉತ್ತಮವಾಗಿಸಲು ಈ ಯೋಜನೆ ಕೈಗೊಳ್ಳಲಾಗಿದೆ,
ಹಂಪನಗೌಡ ಬಾದರ್ಲಿ ಹಾಗೂ ಮಹಾಂತೇಶ್ ಕೌಜಲಗಿ ಪ್ರಶ್ನೆಗೆ ಉತ್ತರಿಸಿದ ಅವರು, 2019ರಿಂದ 2023ರ ವರೆಗೆ ಒಂದೇ ಒಂದು ಬಸ್ ಖರೀದಿ ಆಗಿರಲಿಲ್ಲ. 2023-24ರಲ್ಲಿ 425 ಬಸ್ ಖರೀದಿ ಮಾಡಲಾಗಿದ್ದು, 408 ಬಸ್ಗಳು ಈ ಸಾಲಿನಿಂದಲೇ ಸಾರಿಗೆ ನಿಗಮಗಳ ಸೇವೆಗೆ ಸೇರ್ಪಡೆಗೊಳ್ಳಲಿವೆ ಎಂದರು.

