ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ತಂದಿದ್ದ ಮೂವತ್ತು ಕೋಟಿ ಮೌಲ್ಯದ ಕೊಕೇನ್‌ ಅನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಕಸ್ಟಮ್ಸ್‌ ತಂಡದ ಕಾರ್ಯಾಚರಣೆ ವೇಳೆ ವಿದೇಶದಿಂದ ತಂದಿದ್ದ ಮೂವತ್ತು ಕೋಟಿ ಮೌಲ್ಯದ ಮೂರು ಕೆಜಿ ಕೊಕೇನ್ ಪತ್ತೆಯಾಗಿದೆ. ದೋಹಾದಿಂದ ಬೆಂಗಳೂರಿಗೆ ಇಂಡಿಗೋ 6E1302 ವಿಮಾನದಲ್ಲಿ ಸ್ಮಗ್ಲರ್ ಬಂದಿದ್ದನು.

ಲಗೇಜ್ ಬ್ಯಾಗ್‌ನಲ್ಲಿ 3 ಕೆಜಿ ಕೊಕೇನ್ ಅಡಗಿಸಿಟ್ಟುಕೊಂಡು ಬಂದಿದ್ದನು. ಆದರೆ ಲಗೇಜ್ ಬ್ಯಾಗ್ ಚೆಕ್ಕಿಂಗ್‌ ವೇಳೆ ಕೊಕೇನ್ ಇರುವುದು ಪತ್ತೆಯಾಗಿದೆ. ಸದ್ಯ ಕೊಕೇನ್ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.