ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದ ಬಳಿಕ ಎಫ್ಐಎಚ್ ರ್ಯಾಂಕಿಂಗ್​​ನಲ್ಲಿ 2 ಸ್ಥಾನ ಮೇಲೇರಿದೆ. 7ನೇ ಸ್ಥಾನದೊಂದಿಗೆ ಒಲಿಂಪಿಕ್ ಅಭಿಯಾನ ಪ್ರಾರಂಭಿಸಿದ್ದ ಭಾರತ, ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದು ನಂತರ ಐದನೇ ಸ್ಥಾನಕ್ಕೆ ಏರಿದೆ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತವು ಸ್ಪೇನ್ ಅನ್ನು ಸೋಲಿಸಿ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್​​ನ ಪೋಡಿಯಂ ಸ್ಥಾನಗಳನ್ನು ಗಳಿಸಿತ್ತು.

ಬೆಳ್ಳಿ ಪದಕ ಗೆದ್ದ ಜರ್ಮನಿ 3035.28 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 2973.31 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ ಟೋಕಿಯೊ ಚಿನ್ನದ ಪದಕ ವಿಜೇತ ಬೆಲ್ಜಿಯಂ ನಾಲ್ಕನೇ ಸ್ಥಾನದಲ್ಲಿದೆ.