ಬೆಂಗಳೂರು:  ಕೆಲಸದ ಅವಧಿಯನ್ನು ದಿನಕ್ಕೆ ಸರ್ಕಾರದ ಚಿಂತನೆಯನ್ನು ಐಟಿ ಉದ್ಯೋಗಿಗಳು ತೀವ್ರವಾಗಿ ವಿರೋಧಿಸಿದ್ದು, ರಾಜ್ಯ ಸರ್ಕಾರದ  ವಿರುದ್ಧ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಆಗಸ್ಟ್ 3ರಂದು ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮುಷ್ಕರ ನಡೆಯಲಿದೆ.ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಐಟಿ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಇಳಿಯಲು ಐಟಿ ಉದ್ಯೋಗಿಗಳು ನಿರ್ಧರಿಸಿದ್ದಾರೆ. ಐಟಿ ಎಂಪ್ಲಾಯೀಸ್ ಅಸೋಸಿಯೇಷನ್ ಈ ಬಗ್ಗೆ ಹೋರಾಡಲು ತೀರ್ಮಾನಿಸಿದ್ದು, ಸಾವಿರಾರು ಐಟಿ ಉದ್ಯೋಗಿಗಳು ಸೇರಿ ಆಗಸ್ಟ್‌ 3ರಂದು ಪ್ರತಿಭಟಿಸಲು ಮುಂದಾಗಿದ್ದಾರೆ.