ಬೆಂಗಳೂರು: ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ) ಬೆಂಗಳೂರು ಅರ್ಪಿಸುವ ಪತ್ರಿಕೋದ್ಯಮ ಮತ್ತು ವೈದ್ಯರ ದಿನಾಚರಣೆ 11ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ನಡೆಯಲಿದ. ಜುಲೈ 27 ರ ಶನಿವಾರ ಮಧ್ಯಾಹ್ನ 2;30 ರಿಂದ ಕಾರ್ಯಕ್ರಮ ಆರಂಭಗೊಂಡು ರಾತ್ರಿ 9 ಗಂಟೆಯವರೆಗೆ ನಗರದ ಸಯನ ರಂಗಮಂದಿರ ಬೆಂಗಳೂರು ಇಲ್ಲಿ ನಡೆಯಲಿದೆ.
ಸಮಾರಂಭದ ಉದ್ಘಾಟನೆಯನ್ನು ಡಾ. ಆಂಜನಪ್ಪ ಟಿ.ಎಂ ಹಿರಿಯ ವೈದ್ಯರು ಬೆಂಗಳೂರು, ಅಧ್ಯಕ್ಷತೆಯನ್ನು ಡಾ. ರಾಜು ಶೇಟ್ ಅಧ್ಯಕ್ಷರು, ಆಯುಷ್ ಮಡಿಕಲ್ ಆಫಿಸರ್ಸ್ ಅಸೋಶಿಯಶನ್ (ರಿ.) ಕರ್ನಾಟಕ ಸರ್ಕಾರ. ಇನ್ನು ಈ ಸಮಾರಂಭಕ್ಕೆ ವಿಶೇ ಆಹ್ವಾನಿರತಾಗಿ ಶ್ರೀ ಚಂದನ್ ಶರ್ಮಾ ಸಹಾಯಕ ಸಂಪಾದಕರು ವಿಸ್ತಾರ ನ್ಯೂಸ್, ಮುಖ್ಯ ಅತಿಥಿಗಳಾಗಿ ಶ್ರೀ ರಾಜೇಶ್ ಎಲ್. ವೈ. ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಬೆಂಗಳೂರು, ಶ್ರೀ ಎನ್. ಎಂ ಸುರೇಶ್ ಅಧ್ಯಕ್ಷರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಡಾ. ರಾಜುಕೃಷ್ಣಮೂರ್ತಿ ಹಿರಿಯ ವೈದ್ಯರು ಬೆಂಗೊಳೂರು, ಶ್ರೀ ಮತಿ ಉಮಾ ಮಹೇಶ್ವರಿ ಸಂಸ್ಥಾಪಕರು, ಆರಾಧ್ಯ ಸ್ಕೂಲ್ ಆಫ್ ಫೈನ್ ಆರ್ಟ್ಸ್, ಶ್ರೀಮತಿ ಚಂದ್ರಿಕಾ ಬಿ.ವಿ ಇವೆಂಟ್ ಕೋ- ಆರ್ಡಿನೇಟರ್ ಬೆಂಗಳೂರು.

ಮೋನಿಷಾ ಮತ್ತು ಅಮೃತಾರವರ ನೇತೃತ್ವದಲ್ಲಿ ನಾಟ್ಯ ಸನ್ನಿಧಿ ಮತ್ತು ನೃತ್ಯಾಂಕುರ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಕಿಶೋರ್ ಕುಮಾರ್ ಕೆ. ಎಸ್ ಪ್ರಧಾನ ಕಾರ್ಯದರ್ಶಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ(ರಿ.) ಪುಣ್ಯಭೂಮಿ ಲೇಔಟ್ ಬೆಂಗಳೂರು ಸ್ವಾಗತ ಕೋರಿದ್ದಾರೆ.


