ಬೆಂಗಳೂರು: ಕಳೆದ ತಿಂಗಳು ನಡೆದ ಹತ್ತನೇ ತರಗತಿ ಮುಖ್ಯ ಪರೀಕ್ಷೆಯಲ್ಲಿ ಕೋವಿಡ್ ಕಾರಣದಿಂದ ಗೈರಾದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 27 ಹಾಗೂ 29 ರಂದು ಪೂರಕ ಪರೀಕ್ಷೆ ನಡೆಸಲಾಗುವದು ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.
ಕಳೆದ ತಿಂಗಳು ನಡೆದ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆ ಮಾದರಿಯಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಒಂದು ದಿನ ಮುಖ್ಯ ವಿಷಯಗಳು ಹಾಗೂ ಮತ್ತೊಂದು ದಿನ ಭಾಷಾ ವಿಷಯ ಪರೀಕ್ಷೆ ನಡೆಯಲಿದೆ.
ಪೂರಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಹು ಆಯ್ಕೆ ಮಾದರಿಯಲ್ಲಿ ಇರಲಿದ್ದು, ಪ್ರತಿ ವಿಷಯಕ್ಕೆ 40 ಅಂಕಗಳು ಇರುತ್ತವೆ.