ಲಾಕ್‌ ಡೌನ್‌ ನಲ್ಲೂ ಸರಗಳ್ಳತನ ; ಸಹೋದರರು ಪೋಲೀಸ್‌ ಬಲೆಗೆ

ಬೆಂಗಳೂರು: ಮೈ ಮುರಿದು ದುಡಿದು ತಿನ್ನುವ ಬದಲಿಗೆ ಇಬ್ಬರು ಸಹೋದರರು ಸುಲಭದಲ್ಲಿ ಬದುಕುವ ದಾರಿ ಕಲಿಯಲು ಹೋಗಿ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಸ್ಕೂಟರ್‌ ಹೊಂದಿದ್ದ ಇಬ್ಬರು ಆರೋಪಿಗಳು ದಾರಿಯಲ್ಲಿ ನಡೆದುಕೊಂಡು ಹೋಗುತಿದ್ದ ವೃದ್ದೆಯ ಸರ ಎಗರಿಸಿ ಪೋಲೀಸರ ಅತಿಥಿಗಳಾಗಿದ್ದಾರೆ. ಬಂಧಿತರನ್ನು ಕಾಮಾಕ್ಷಿಪಾಳ್ಯ ನಿವಾಸಿಗಳಾದ ಸುದೀಪ್ ಹಾಗೂ ರಜತ್ ಎಂದು ಗುರುತಿಸಲಾಗಿದೆ.

ಜುಲೈ 6ರಂದು ವಿದ್ಯಾರಣ್ಯಪುರದ ಎಂಪಿಎ ಲೇಔಟಿನಲ್ಲಿ ಆರೋಪಿಗಳು ಸರಗಳ್ಳತನ ಮಾಡಿದ್ದು, 62 ವರ್ಷದ ವೃದ್ಧೆಯ ಸರಗಳ್ಳತನ ಮಾಡಿ, ಪರಾರಿಯಾಗಿದ್ದರು. ಆರೋಪಿಗಳ ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಬಂಧನದಿಂದ 2 ಸರ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಇಬ್ಬರು ಕಳ್ಳರು ಸಹ ಸಹೋದರರು. ಲಾಕ್‍ಡೌನ್ ನಲ್ಲಿ ಕೆಲಸವಿಲ್ಲದೆ ಸರಗಳ್ಳತನಕ್ಕಿಳಿದಿದ್ದರು. ಪದವಿ ವ್ಯಾಸಂಗ ಮುಗಿಸಿದ್ದ ಸುದೀಪ್ ಹಾಗೂ ರಜತ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ನಲ್ಲಿ ಕೆಲಸವಿಲ್ಲದೆ ಪರಿತಪಿಸಿದ್ದರು. ಕೆಲಸ ಸಿಗದ್ದರಿಂದ ಹಣಕ್ಕಾಗಿ ಸರಗಳ್ಳತನ ಮಾಡಲು ಮುಂದಾಗಿ ಇದೀಗ ಜೈಲು ಸೇರಿದ್ದಾರೆ.

Indresh KC

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

45 mins ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

1 hour ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

1 hour ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

2 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

2 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

2 hours ago