News Karnataka Kannada
Thursday, May 02 2024
ಬೆಂಗಳೂರು

ಯುಟ್ಯೂಬ್ ನೋಡಿ ಕಳ್ಳತನ ಪೋಲಿಸರನ್ನೆ ಬೆಸ್ತುಗೊಳಿಸಿದ ಕಳ್ಳರ ಗ್ಯಾಂಗ್

Theft 07082021
Photo Credit :

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಪೋಲಿಸ್ ಇಲಾಖೆ ತಲೆ ನೋವಾಗಿದೆ.ಅದರ ಬೆನ್ನಲ್ಲೆ ಇದೀಗ ಇಂತಹದೇ ಅಪರಾಧ ಪ್ರಕರಣ ಮತ್ತೊಮ್ಮೆ ವರದಿಯಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಚಾಲಾಕಿ ಖದೀಮರು ಪೊಲೀಸರ ಮನಗೇ ಕನ್ನ ಹಾಕಿದರೆ ಮತ್ತೊಂದು ಪ್ರಕರಣದಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಕಳವು ಮಾಡುತ್ತಿದ್ದವರಿಗೆ ಪೊಲೀಸರು ಖೆಡ್ಡಾ ತೋಡಿದ್ದಾರೆ.

ಯುಟ್ಯೂಬ್‌ನಲ್ಲಿ ಬೈಕ್‌ ಕಳವು ಮಾಡುವ ವಿಡಿಯೋಗಳನ್ನು ನೋಡಿ ಬೈಕ್‌ ಕಳವು ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜು, ಅಪ್ಪು ಸೇರಿ ಮೂವರು ಬಂಧಿತರು. ಆರೋಪಿಗಳಿಂದ 8 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳಿಬ್ಬರು ಬೆಳಗಿನ ಸಮಯದಲ್ಲಿ ಎಲ್ಲ ಬಡಾವಣೆಗಳಲ್ಲಿ ಓಡಾಡಿ ಮನೆ ಮುಂದೆ ನಿಲ್ಲಿಸಿರುವ ಬೈಕ್‌ಗಳನ್ನು ಗುರುತಿಸುತ್ತಿದ್ದರು. ಎರಡು ಮೂರು ದಿನಗಳ ಕಾಲ ಬೈಕ್‌ ನಿಂತಲ್ಲೇ ನಿಂತಿದ್ದರೆ ಅವುಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದರು. ರಾಜು ಹಾಗೂ ಅಪ್ಪು ಇಬ್ಬರು ಜತೆಗೂಡಿ ಬ್ಯಾಟರಾಯನಪುರ, ಹಲಸೂರುಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡುತ್ತಿದ್ದರು.

ಮನೆ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸುವ ಬೈಕ್‌ಗಳನ್ನೇ ಟಾರ್ಗೆಟ್‌ ಮಾಡಿ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದರು. ಇತ್ತೀಚೆಗೆ ಹಲಸೂರು ಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್‌ ಠಾಣೆ ಪೊಲೀಸರು, ಈ ಕೃತ್ಯದಲ್ಲಿ ಮತ್ತೆಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು