ಬಿಟ್ ಕಾಯಿನ್ ಹಾಗೂ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ.
ಸಿಸಿಬಿ ಕೋರ್ಟ್ ಆದೇಶದಂತೆ ಮೆಡಿಕಲ್ ಟೆಸ್ಟ್ ಮಾಡಿಸಿತ್ತು. ತನಿಖೆ ವೇಳೆ ಕೋರ್ಟ್ಗೆ ಹಾಜರು ಪಡಿಸಿದ್ದ ಸಿಸಿಬಿ ತಂಡ, ಜನವರಿ 11 ರಂದು 1ನೇ ಎಸಿಎಂಎಂ ಕೋರ್ಟ್ಗೆ ಹಾಜರು ಪಡಿಸಿತ್ತು. ಈ ವೇಳೆ ಅಲ್ಪ್ರಜೋಲಮ್ ಮಾತ್ರೆ ನೀಡ್ತಿರುವುದಾಗಿ ಉಲ್ಲೇಖ ಮಾಡಲಾಗಿತ್ತು. ಹೀಗಾಗಿ ಶ್ರೀಕಿಯನ್ನು ಪೊಲೀಸರು ಪರೀಕ್ಷೆಗೆ ಒಳಪಡಿಸಿದ್ದರು.
ವಿಕ್ಟೋರಿಯಾ ಕೊವಿಡ್ ಸೆಂಟರ್ ಆಗಿದ್ದ ಹಿನ್ನೆಲೆ ಮಡಿವಾಳದ ಎಫ್ಎಸ್ಎಲ್ನಲ್ಲಿ ಟೆಸ್ಟಿಂಗ್ ನಡೆಸಲಾಗಿತ್ತು. ಯೂರಿನ್, ಬ್ಲಡ್ ಸ್ಯಾಂಪಲ್ಗಳ ಮುಖಾಂತರ ಟೆಸ್ಟಿಂಗ್ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಶ್ರೀಕೃಷ್ಣನ ವೈದ್ಯಕೀಯ ವರದಿ ನೆಗೆಟಿವ್ ಎಂದು ಬಂದಿದೆ. ಶ್ರೀಕಿ ಡ್ರಗ್ ಸೇವಿಸಿಲ್ಲ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.