ಪುನೀತ್‌ ಸಾವಿನಿಂದ ಆಘಾತಗೊಂಡ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ತಮಿಳು ನಟ ವಿಶಾಲ್

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರು ನಟನೆಯ ಜೊತೆ ಹಲವಾರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡವರು. ಅವರು ಮಾಡಿರುವ ಸಮಾಜ ಸೇವೆಗಳ ಮೂಲಕ ಅವರು ಎಲ್ಲರ ಹೃದಯದಲ್ಲಿ ನೆಲೆಸಿರುತ್ತಾರೆ. ಪುನೀತ್‌ ಅವರು ಸದ್ದಿಲ್ಲದೇ ಮಾಡುತ್ತಿದ್ದ ಸಮಾಜಸೇವೆಗಳಿಗೆ ಲೆಕ್ಕವೇ ಇಲ್ಲ.

ಅದರಲ್ಲಿ ಒಂದು ಅವರು 1800 ಮಕ್ಕಳನ್ನು ಓದಿಸುತ್ತಿದ್ದರು. ಅವರ ಓದಿನ ಜವಾಬ್ದಾರಿಯನ್ನು ತಾವು ತೆಗೆದುಕೊಂಡಿದ್ದರು. ಹುಟ್ಟಿದ್ದು ತಮಿಳುನಾಡಿನಲ್ಲಾದರೂ ಕನ್ನಡನಾಡಿಗಾಗಿ ಅವರು ಮಾಡಿದ ಸೇವೆ ಅಷ್ಟಿಷ್ಟಲ್ಲ, ಇದರ ಜತೆಗೇ ತಮಿಳುನಾಡಿನಲ್ಲಿಯೂ ಹಲವಾರು ಕಾರ್ಯಗಳನ್ನು ಮಾಡಿ ಅವರು ಅಲ್ಲಿಯ ಜನರ ಮನಸ್ಸನ್ನೂ ಗೆದ್ದವರು. ಇದೇ ಕಾರಣಕ್ಕೆ ಪುನೀತ್‌ ಅವರ ಅಗಲಿಕೆಯಿಂದ ಅನಾಥಪ್ರಜ್ಞೆಯಿಂದ ಬಳಲುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ತಾವು ಹೊತ್ತುಕೊಳ್ಳುವುದಾಗಿ ತಮಿಳು ನಟ ವಿಶಾಲ್​ ಘೋಷಿಸಿದ್ದಾರೆ.

ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ಅವರು ಘೋಷಣೆ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರಾದ, ತಮಿಳು ನಟ ವಿಶಾಲ್ ಅವರು ಅಪ್ಪು ಮೇಲಿನ ಅಭಿಮಾನದೊಂದಿಗೆ ತಾವು ತೆಗೆದುಕೊಂಡಿರುವ ನಿರ್ಣಯವನ್ನು ನಿನ್ನೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ತೆಗೆದುಕೊಂಡಿದ್ದಾರೆ.

ಇದಕ್ಕೆ ಕನ್ನಡಿಗರಂತೂ ಜಾಲತಾಣದಲ್ಲಿ ವಿಶಾಲ್ ಅವರ ವಿಶಾಲ ಹೃದಯವನ್ನು ಕೊಂಡಾಡಿದ್ದಾರೆ. ನಟ, ರಾಜಕಾರಣಿಗೂ ಇಂತಹ ಯೋಚನೆ ಬರದಿರುವಾಗ ತಮಿಳು ನಟನೊಬ್ಬ ಈ ರೀತಿ ಮಾತನಾಡಿರುವುದು ಗ್ರೇಟ್ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

Swathi MG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

2 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

3 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

3 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

3 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

4 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

4 hours ago