ದೀಪಾವಳಿಯನ್ನು ಜಶ್ನ್-ಇ-ರಿವಾಜ್ ಎಂದು ಫ್ಯಾಬ್ ಇಂಡಿಯಾ ಹೇಳಿದ್ದು, ಸಂಸದ ತೇಜಸ್ವಿ ಸೂರ್ಯ ಇದರ ವಿರುದ್ಧ ಮಾತನಾಡಿದ್ದಾರೆ.
ದೀಪಾವಳಿ ಜಶ್ನ್-ಇ-ರಿವಾಜ್ ಖಂಡಿತಾ ಅಲ್ಲ. ಈ ರೀತಿ ಹಿಂದೂ ಹಬ್ಬಗಳನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಲು ಯತ್ನಿಸುವುದು, ಮಾಡೆಲ್ಗಳಿಗೆ ಸಾಂಪ್ರದಾಯಿಕ ಹಿಂದೂ ಉಡುಗೆಗಳನ್ನು ತೊಡಿಸದಿರುವುದು, ಈ ರೀತಿ ಪ್ರಕ್ರಿಯೆಗಳು ಈ ಕೂಡಲೇ ನಿಲ್ಲಬೇಕು.
ಇಂಥ ಉದ್ದೇಶಪೂರ್ವಕ ಕೃತ್ಯಕ್ಕೆ ಫ್ಯಾಬ್ ಇಂಡಿಯಾ ಆರ್ಥಿಕ ಬೆಲೆ ತೆರುವಂತಾಗಬೇಕು ಎಂದಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಹೀಗೆ ಟ್ವಿಟ್ಟರಿನಲ್ಲಿ ಪ್ರಶ್ನೆ ಎತ್ತಿದ ಕೆಲವೇ ಸಮಯದಲ್ಲಿ ಫ್ಯಾಬ್ ಇಂಡಿಯಾ ತನ್ನ ಟ್ವೀಟ್ ತೆಗೆದುಹಾಕಿದೆ.
Deepavali is not Jash-e-Riwaaz.
This deliberate attempt of abrahamisation of Hindu festivals, depicting models without traditional Hindu attires, must be called out.
And brands like @FabindiaNews must face economic costs for such deliberate misadventures. https://t.co/uCmEBpGqsc
— Tejasvi Surya (ಮೋದಿಯ ಪರಿವಾರ) (@Tejasvi_Surya) October 18, 2021