ಬೆಂಗಳೂರು: ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ ಬರೋಬ್ಬರಿ 999 ಹೆಡ್ ಕಾನ್ಸ್ಟೇಬಲ್ ಗಳನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಕೆಲವರು ಕಳೆದ 11 ವರ್ಷಗಳಿಂದ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅಂತವರನ್ನು ವರ್ಗಾವಣೆ ಮಾಡಲಾಗಿದೆ.
ಇನ್ನೂ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರಲು ಮುಂದಿನ ದಿನಗಳಲ್ಲಿ ಇನ್ಸ್ಪೆಕ್ಟರ್ಗಳನ್ನು ಇದೇ ರೀತಿ ವರ್ಗಾವಣೆ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ತಿಳಿಸಿದರು.
ಅದಲ್ಲದೆ ಕರ್ನಾಟಕ ಸರ್ಕಾರ 15 ಡಿವೈಎಸ್ಪಿ, 15 ಮಂದಿ ಎಸಿಪಿ ಹಾಗೂ 48 ಮಂದಿ ಇನ್ಸ್ಪೆಕ್ಟರನ್ನು ವರ್ಗಾವಣೆ ಮಾಡಿದೆ.