ಬೆಂಗಳೂರು : ಅನುಶ್ರೀ ಹೆಸರು ತಳುಕು ಹಾಕಿಕೊಂಡಿದ್ದ ಡ್ರಗ್ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ನಾನು ಅನುಶ್ರೀ ವಿರುದ್ಧ ಆ ತರ ಯಾವುದೇ ಹೇಳಿಕೆ ನೀಡಿಲ್ಲ. ಸಿಸಿಬಿ ಪೊಲೀಸರು ಚಾರ್ಜ್ಶೀಟ್ನಲ್ಲಿ ನನ್ನ ಹೆಸರಲ್ಲಿ ದಾಖಲಿಸಿರುವ ಹೇಳಿಕೆ ಎಲ್ಲವೂ ಸುಳ್ಳು ಎಂದು ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಕಿಶೋರ್, ಅನುಶ್ರೀಗೂ ಡ್ರಗ್ಸ್ ಕೇಸ್ಗೂ ಯಾವುದೇ ಸಂಬಂಧ ಇಲ್ಲ. ಚಾರ್ಜ್ ಶೀಟ್ನಲ್ಲಿ ಬಂದಿರುವುದೆಲ್ಲ ಸಂಪೂರ್ಣ ಸುಳ್ಳು. ಅನುಶ್ರೀ ಜತೆ ಯಾವುದೇ ಡ್ರಿಂಕ್ಸ್, ಡ್ರಗ್ಸ್ ಪಾರ್ಟಿ ಮಾಡಿಲ್ಲ. ನಾನು ಅನುಶ್ರೀಗೆ ಕೇವಲ ಕೊರಿಯೋಗ್ರಾಫ್ ಮಾಡುತ್ತಿದ್ದೆ. ಆಮೇಲೆ ಅನುಶ್ರೀಯವರ ಜತೆ ಸಂಬಂಧ ಇಲ್ಲ. ಈಗ ಹಬ್ಬಿರುವ ಸುಳ್ಳು ವಿಚಾರದ ಹಿಂದೆ ಬೇರೆ ಯಾರೋ ಇರಬಹುದು ಎಂದು ಹೇಳಿದ್ದಾನೆ.