ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಕಾಂಗ್ರೆಸ್ ಸಭೆಯಲ್ಲಿಯೇ ಉಗ್ರಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಗಾಸಿಪ್ ಮಾಡಿದ್ದು, ವಿಡಿಯೋ ಮೂಲಕ ಸಿಕ್ಕಿಬಿದ್ದಿದ್ದಾರೆ.
ಡಿಕೆಶಿ ಕುಡುಕ, ಅವರು ಮಾತನಾಡುವಾಗ ತೊದಲುತ್ತಾರೆ ಎಂದು ಹೇಳಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯ ಕಂಡು ಜನ ನಗುತ್ತಿದ್ದಾರೆ.
ಬೇರೆ ಪಕ್ಷದವರ ಬಗ್ಗೆ ಓಪನ್ ಆಗಿ ಹೇಳಿಕೆ ನೀಡುವ ಇವರು, ಒಳಗೊಳಗೆ ತಮ್ಮ ಪಕ್ಷದವರ ಬಗ್ಗೆಯೇ ಮಾತನಾಡಿದ್ದಾರೆ. ಡಿಕೆಶಿ ಹೇಗೆ ದುಡ್ಡು ಮಾಡುತ್ತಾರೆ, ಅವರ ಬಳಿ ಎಷ್ಟು ಆಸ್ತಿ ಇದೆ ಎಂದೆಲ್ಲಾ ಗಾಸಿಪ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.