ಬೆಂಗಳೂರು: ಒಮಿಕ್ರೋನ್ ಸೋಂಕಿತ ವೈದ್ಯೆ ಪತ್ನಿಗೂ ಕೋವಿಡ್ ಸೋಂಕು ಹೆಚ್ಚಾಗಿದ್ದು, ಈ ನಡುವೆ ಅವರ ಮನೆಯಲ್ಲಿದ್ದ 8 ಮಂದಿಯ ವರದಿ ನೆಗೆಟಿವ್ ಆಗಿದ್ದು, ತುಸು ಸಮಾಧಾನವನ್ನು ಮೂಡಿಸಿದೆ. ಸದ್ಯ ಒಮಿಕ್ರೋನ್ ಸೋಂಕಿತ ವೈದ್ಯ ಹಾಗು ಪತ್ನಿಯನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ವೈದ್ಯರ ಮನೆಯಲ್ಲಿ ಒಟ್ಟು 10 ಮಂದಿ ವಾಸವಿದ್ದು, ಉಳಿದ 8 ಮಂದಿಯ ವರದಿ ಕೋವಿಡ್ ನೆಗೆಟಿವ್ ಆಗಿ 8 ಮಂದಿಯನ್ನು ಹೋಮ್ ಐಸೋಲೇಷನ್ನಲ್ಲಿ ಇರಿಸಲಾಗಿದೆ. ವೈದ್ಯರ ಮನೆಯನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.
ವೈದ್ಯರ ಪತ್ನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿರುವ ಕಾರಣಕ್ಕೆ ಆರ್ಬಿಐ ಲೇಔಟ್ನ 100 ಮೀಟರ್ ರಸ್ತೆಯನ್ನು ಬಿಬಿಎಂಪಿ ಬ್ಯಾರಿಕೇಡ್, ರೆಡ್ಟೇಪ್ ಹಾಕಲಾಗಿದ್ದು ಸೋಂಕಿತ ವೈದ್ಯರ ಮನೆಗೆ ನಿರ್ಬಂಧಿತ ಪ್ರದೇಶ ಎಂದು ಸೂಚಿಸಲಾಗಿದೆ.