ಬೆಂಗಳೂರು : ಕರ್ನಾಟಕದಲ್ಲಿ ಇಂಟರ್ನೆಟ್ ಸುಧಾರಣೆಗಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಕಾರ್ಯಪಡೆ ರಚನೆ ಮಾಡಲಾಗಿದೆ.
ಮನವಿ ಸ್ವೀಕರಿಸಿದ ರಾಜೀವ್ ಚಂದ್ರಶೇಖರ್ ಪ್ರತಿಯೊಂದು ಜಿಲ್ಲೆಗಳಲ್ಲೂ ಆ ಬಗ್ಗೆ ಅಧ್ಯಯನ ನಡೆಸಲು ಎಂಇಐಟಿವೈ ಕಾರ್ಯಪಡೆಯನ್ನು ಕಳುಹಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಅದರಂತೆ ಇದೀಗ ಇಂಟರ್ನೆಟ್ ಸುಧಾರಣೆಗಾಗಿ ಕಾರ್ಯಪಡೆ ರಚನೆ ಮಾಡಿದ್ದಾರೆ.
ಈ ಬದ್ಧತೆಗೆ ಪ್ರತಿಕ್ರಿಯೆಯಾಗಿ, ತಕ್ಷಣವೇ ಭೇಟಿ ಮಾಡಿ ಕಾರ್ಯಾರಂಭ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಇಂಟರ್ನೆಟ್ ಎಕ್ಸಚೇಂಜ್ ಆಫ್ ಇಂಡಿಯಾ (ಎನ್ ಐಎಕ್ಸ್ ಐ) ಮತ್ತು ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ ಟಿಪಿಐ) ಪ್ರತಿನಿಧಿಗಳನ್ನು ಒಳಗೊಂಡ ಎಂಇಐಟಿವೈ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ.
ಕಾರ್ಯಪಡೆಯ ಪ್ರತಿನಿಧಿಗಳು ಪ್ರತಿ ಜಿಲ್ಲೆಗೂ ಭೇಟಿ ನೀಡುವರು ಮತ್ತು ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವರು. ಅವರು ರಾಜ್ಯ ಸರ್ಕಾರಿ ಅಧಿಕಾರಿಗಳನ್ನೂ ಸಹ ಭೇಟಿ ಮಾಡಿ ಸಮಾಲೋಚನೆ ನಡೆಸುವರು ಮತ್ತು ಸಚಿವರಿಗೆ ವರದಿಯನ್ನು ಸಲ್ಲಿಸುವರು.