News Karnataka Kannada
Friday, May 03 2024
ಬೆಂಗಳೂರು

ಆರೋಪಿಯ ಖಾತೆಯಿಂದ ಯಾವುದೇ ಬಿಟ್‌ಕಾಯಿನ್ ವರ್ಗಾವಣೆಯಾಗಿಲ್ಲ, ಅದು ಕಳೆದೂ ಹೋಗಿಲ್ಲ : ನಗರ ಪೊಲೀಸ್ ಆಯುಕ್ತರ ಕಚೇರಿ ಸ್ಪಷ್ಟನೆ

Bitcoin
Photo Credit :

ಬೆಂಗಳೂರು: ಹ್ಯಾಕರ್ ಶ್ರೀಕೃಷ್ಣ ಭಾಗಿಯಾಗಿರುವ ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣಗಳಿಗೆ ಸಂಬಂಧಿಸಿ ದಿನಕ್ಕೊಂದು ಆರೋಪಗಳು, ಊಹಾಪೋಹಗಳು ಕೇಳಿಬರುತ್ತಿದೆ. ಪ್ರಕರಣದಲ್ಲಿ ‘ಖಾಕಿ’ ಪಡೆಯೇ ಭಾಗಿಯಾಗಿದೆ ಎಂಬ ಆರೋಪದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರ ಕಚೇರಿಯು ಸ್ಪಷ್ಟನೆ ನೀಡಿದೆ. ಆರೋಪಿಯ ಖಾತೆಯಿಂದ ಯಾವುದೇ ಬಿಟ್‌ಕಾಯಿನ್ ವರ್ಗಾವಣೆಯಾಗಿಲ್ಲ, ಅದು ಕಳೆದೂ ಹೋಗಿಲ್ಲ ಎಂದು ಹೇಳಿದೆ.

ಕೆ.ಜಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ದೂರಿನಿಂದ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಬಗ್ಗೆ ವಿಚಾರ ಬಯಲಾಗಿತ್ತು. 500 ಗ್ರಾಂ ಹೈಡ್ರೋ ಗಾಂಜಾ ಸಹಿತ ಓರ್ವ ಆರೋಪಿ ಸೆರೆ ಆಗಿದ್ದ. ಬಳಿಕ ಸೆರೆಯಾದ 10 ಜನ ಪೈಕಿ ಶ್ರೀಕಿ ಯಾನೆ ಶ್ರೀಕೃಷ್ಣ ಕೂಡ ಓರ್ವ ಆರೋಪಿಯಾಗಿದ್ದ. ವಿಚಾರಣೆ ವೇಳೆ ಆತ ಕ್ರಿಪ್ಟೋ ಕರೆನ್ಸಿ ವೆಬ್‌ಸೈಟ್ ಹ್ಯಾಕಿಂಗ್ ಬಗ್ಗೆ ಮಾಹಿತಿ ನೀಡಿದ್ದ.

ನಂತರ ಆತನ ಬಳಿ ಇದ್ದ ಬಿಟ್ ಕಾಯಿನ್‌ಗಳನ್ನು ವಶಕ್ಕೆ ಪಡೆಯಲು ವ್ಯಾಲೆಟ್ ತೆರೆಯುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಸರಕಾರದ ಅನುಮತಿ ಪಡೆಯಿತು. ಆರೋಪಿ ಶ್ರೀಕೃಷ್ಣ ತೋರಿಸಿದ ವ್ಯಾಲೆಟ್‌ನಲ್ಲಿ ಮೊದಲು 31.8 ಬಿಟ್‌ಕಾಯಿನ್‌ಗಳಿದ್ದವು. ವಾಲೆಟ್ ಸೈಬರ್ ತಜ್ಞರು, ಸರಕಾರಿ ಪಂಚರ ಸಮ್ಮುಖದಲ್ಲಿ ಪಾಸ್‌ವರ್ಡ್ ಬದಲಾಯಿಸಲಾಯಿತು. ಸಂಪೂರ್ಣ ಕಾರ್ಯವಿಧಾನವನ್ನು ಮಹಜರ್ ಅಡಿಯಲ್ಲಿ ದಾಖಲಿಸಿ, ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

ತೋರಿಸಿದ್ದ ವ್ಯಾಲೆಟ್ ಆರೋಪಿಯದ್ದಲ್ಲ:
ಈ ಬಿಟ್ ಕಾಯಿನ್‌ಗಳನ್ನು ಪೊಲೀಸ್ ವ್ಯಾಲೆಟ್ ಖಾತೆಗೆ ವರ್ಗಾಯಿಸಲು ಪಾಸ್‌ವರ್ಡ್ ಬಳಸಲು ನ್ಯಾಯಾಲಯದ ಅನುಮತಿ ಪಡೆದು, ವಾಲೆಟ್ ತೆರೆದಾಗ ಅದರಲ್ಲಿ 186.811 ಬಿಟ್ ಕಾಯಿನ್‌ಗಳು ಕಂಡುಬಂದಿವೆ. ವಿಚಾರಣೆಯಲ್ಲಿ ಆರೋಪಿಯು ತನ್ನ ವೈಯಕ್ತಿಕ ಖಾತೆ ಎಂದು ಹೇಳಿಕೊಂಡ ಖಾತೆಯು ವಿನಿಮಯದ ಲೈವ್ ವ್ಯಾಲೆಟ್ ಮತ್ತು ಆರೋಪಿಯ ಬಳಿ ಇದಕ್ಕಾಗಿ ಖಾಸಗಿ ಕೀ ಇರಲಿಲ್ಲ ಎಂದು ಸೈಬರ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಆ ಖಾತೆಯನ್ನು ಹಾಗೇ ಬಿಡಲಾಗಿದೆ.

ತನಿಖೆಯಲ್ಲಿ ಬಾಹ್ಯ ಒತ್ತಡಕ್ಕೆ ಮಣಿದಿಲ್ಲ:
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಹ್ಯ ಒತ್ತಡಗಳಿಗೆ ಒಳಗಾಗಿ ತನಿಖೆ ನಡೆಸಿಲ್ಲ. ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಬಿಟ್ ಕಾಯಿನ್ ಪ್ರಕರಣ ಸಂಬಂಧ ಸೈಬರ್ ಕ್ರೈಂ, ಕೆ.ಜಿ.ನಗರ, ಅಶೋಕನಗರ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ. ಕೆ.ಜಿ. ನಗರ ಠಾಣೆಯ ಪ್ರಕರಣ ಹೊರತುಪಡಿಸಿ, ಉಳಿದೆರಡು ಪ್ರಕರಣಗಳ ದೋಷಾರೋಪಣಾ ಪಟ್ಟಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಪೊಲೀಸರು ಡ್ರಗ್ ಕೊಟ್ಟಿದ್ದೂ ಸುಳ್ಳು:
ಶ್ರೀಕೃಷ್ಣನ ಬಂಧನದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ. ಆತನ ಬಳಿ ಪತ್ತೆಯಾದ ಮಾದಕ ವಸ್ತು ಕುರಿತು ತನಿಖೆಗೆ ಕಸ್ಟಡಿಗೆ ಕೇಳಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿ ಪೊಲೀಸರು ಡ್ರಗ್ ನೀಡಿದ್ದರೆಂದು ಆರೋಪಿ ಹೇಳಿಕೆ ನೀಡಿದ್ದರೆ, ಆತನ ಪರ ವಕೀಲರು ವಾದಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಪಿಗಳ ರಕ್ತ ಮತ್ತು ಮೂತ್ರದ ಮಾದರಿ ಸಂಗ್ರಹಿಸಲು ತನಿಖಾಧಿಕಾರಿಗೆ ನ್ಯಾಯಾಲಯವು ನಿರ್ದೇಶನ ನೀಡಿತ್ತು. ವಿಕ್ಟೋರಿಯಾದಲ್ಲಿ ಸಾಧ್ಯವಾಗದ ಕಾರಣ ಅನುಮತಿ ಪಡೆದು, ಬೌರಿಂಗ್ ಆಸ್ಪತ್ರೆಯಲ್ಲಿ ರಕ್ತ ಮತ್ತು ಮೂತ್ರದ ಮಾದರಿಯನ್ನು ಎಫ್ಎಸ್‌ಎಲ್‌ಗೆ ಕಳಿಸಲಾಗಿತ್ತು. ವರದಿ ನೆಗೆಟಿವ್ ಬಂದಿದೆ. ನಂತರ ಆತನ ಬಂಧನದ ವಿಚಾರವಾಗಿ ನಾನಾ ಆರೋಪಗಳನ್ನು ಮಾಡಿ ರಿಟ್ ಅರ್ಜಿ ಹಾಕಲಾಗಿತ್ತು. ನ್ಯಾಯಾಲಯವು ರಿಟ್ ಅರ್ಜಿಯನ್ನು ವಜಾಗೊಳಿಸಿ, ಅರ್ಜಿ ಸಲ್ಲಿಸಿದವರಿಗೆ ₹ 5 ಸಾವಿರ ದಂಡ ವಿಧಿಸಿದೆ.

ಪೊಲೀಸ್ ಸಿಬ್ಬಂದಿ, ನುರಿತ ಸೈಬರ್ ತಜ್ಞರನ್ನು ಒಳಗೊಂಡಂತೆ ಪ್ರಕರಣದ ತನಿಖೆ ನಡೆಸಲಾಗಿದೆ. ತನಿಖೆಯ ಪ್ರತೀ ಹಂತದಲ್ಲಿಯೂ ವೀಡಿಯೊ ಚಿತ್ರೀಕರಣ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಪ್ರಕರಣೆ ತಿಳಿಸಿದೆ.

* ಸೈಬರ್ ತಜ್ಞರ ಸಲಹೆ ಪಡೆದಾಗ ಆರೋಪಿ ಹೇಳಿರುವ ಸಾಕಷ್ಟು ವಿಚಾರ ಆಧಾರರಹಿತ ಎಂದು ಸಾಬೀತಾಗಿದೆ.
* ಪ್ರಕರಣ ದಾಖಲಾಗಿ 1 ವರ್ಷವೇ ಕಳೆದಿದೆ. ಬಿಟ್ ಕಾಯಿನ್ ಅಥಾರಿಟಿ ಸಹ ನಮ್ಮನ್ನು ಸಂಪರ್ಕಿಸಿಲ್ಲ.
* ಬಿಟ್ ಫಿನೆಕ್ಸ್ ಕಂಪನಿಗೆ 14,682 ಬಿಟ್ ಕಾಯಿನ್ ವರ್ಗಾವಣೆ ಮಾಡಿರುವ ಕುರಿತು ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿಲ್ಲ.
* ಬಿಟ್ ಕಾಯಿನ್‌ಗಳ ವರ್ಗಾವಣೆ ಬೆಂಗಳೂರಿನಿಂದ ನಡೆದಿದೆ ಎಂಬುದಕ್ಕೆ ಯಾವ ಆಧಾರಗಳೂ ಇಲ್ಲ.
* ಬಿಟ್ ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ಸರ್ವರ್‌ಗಳನ್ನು ಹ್ಯಾಕ್ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದ.
* ವಿಚಾರಣೆ ವೇಳೆ ಆರೋಪಿಯ ಯಾವುದೇ ಹೇಳಿಕೆಗಳಿಗೂ ಆಧಾರಗಳು ಲಭಿಸಿಲ್ಲ.
* ಆದಾಗ್ಯೂ 2021ರ ಏಪ್ರಿಲ್ 28ರಂದು ಇಂಟರ್ ಪೋಲ್‌ಗೆ ಮಾಹಿತಿ ನೀಡಲಾಗಿದೆ.
* 2021ರ ಮಾರ್ಚ್ 3ರಂದು ಜಾರಿ ನಿರ್ದೇಶನಾಲಯದೊಂದಿಗೂ ದಾಖಲೆಗಳನ್ನು ಹಂಚಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು