ಬೆಂಗಳೂರು: ರಸ್ತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೋಲೀಸರು ದಂಡ ಸಂಗ್ರಹಿಸಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದರೂ ಅವರ ಕಣ್ಣಗಳಿಂದ ತಪ್ಪಿಸಿಕೊಳ್ಳುವ ಸವಾರರ ಮೇಲೆ ಕಣ್ಣಿಡಲು ಬೆಂಗಳೂರಿನ ಹಲವು ಕಡೆಗಲ್ಲಿ ಆಟೋಮೆಟಿಕ್ ನಂಬರ್ ಪ್ಲೇಟ್ ರಿಜಿಸ್ಟರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಕ್ಯಾಮರಾಗಳು ಅಳವಡಿಕೆಯಾಗಿ ೧ ವರ್ಷದಲ್ಲಿ ನಿಯಮಗಳ ಉಲ್ಲಂಘನೆಯ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ೨೦೨೩ರ ಮೇ ತಿಂಗಳಲ್ಲಿ ೩,೩೫,೮೧೮ ಕೇಸ್ ದಾಖಲೆಯಾಗಿದ್ದು, ಇದು ಕಳೆದ ವರ್ಷದಲ್ಲಿ ಅತ್ಯಧಿಕವಾಗಿದೆ.
ಟ್ರಾಫಿಕ್ ಸಿಗ್ನಲ್ ಜಂಪಿಂಗ್ ಕೇಸ್, ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದಿರುವುದು, ಇಂತಹ ಹಲವು ಪ್ರಕರಣಗಳು ದಾಖಲಾಗಿವೆ.
ಸದ್ಯ ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.