ಬೆಳಗಾವಿ: ಚಳಿಗಾಲದ ಅಧಿವೇಶನ ಹಿನ್ನೆಲೆ ಮಂಗಳೂರಿನಲ್ಲಿ ಸ್ಪೀಕರ್ ಯುಟಿ ಖಾದರ್ ಮಾಧ್ಯಮ ಗೋಷ್ಠಿ ನಡೆಸಿದರು. ಅಧಿವೇಶನದಲ್ಲಿ ಭಾಗವಹಿಸುವ ಎಲ್ಲರಿಗೂ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿ ಪ್ರತಿಭಟನೆ ಮಾಡೋಕೂ ಸ್ಥಳವನ್ನು ನಿಗದಿ ಮಾಡಲಾಗಿದೆ ಎಂದರು.

ಅಧಿವೇಶನದಿಂದ ಸ್ಥಳೀಯರಿಗೂ ಸ್ಪಲ್ಪ ಕಿರಿಕಿರಿಯಾಗಬಹುದು. ಜನರು ಸಹಕಾರವನ್ನು ನೀಡಬೇಕು ಎಂದು ಕೋರುತ್ತಿದ್ದೇನೆ. ಅಧಿವೇಶನದಲ್ಲಿ ಪಾಸ್ ಮಾಡೋಕೆ ಹಲವಾರು ಬಿಲ್ ಗಳು ಬಂದಿದೆ. ಅಧಿವೇಶನದ ಮೊದಲ ಆದ್ಯತೆ ಬಿಲ್ ಪಾಸ್ ಮಾಡೋದು ಆಗಿದೆ ಎಂದರು.

ರಾಜ್ಯದ ಹಿತದೃಷ್ಟಿಯಿಂದ ಬಿಲ್ ಪಾಸ್ ಮಾಡೋದು ಮುಖ್ಯ ಉದ್ದೇಶ. ಅಧಿವೇಶನದಲ್ಲಿ ಚರ್ಚೆಗೆ ಆರು ಬಿಲ್ ಗಳು ಈಗಾಗಲೇ ಬಂದಿವೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿಕೆ ನೀಡದರು.