News Karnataka Kannada
Saturday, April 27 2024
ವಿಜಯಪುರ

ಗುಮ್ಮಟ ನಗರಿಯಲ್ಲಿ ಕಣ್ಮನ ಸೆಳೆಯುವ ಶಿವಗಿರಿ

ಸಾಮಾನ್ಯವಾಗಿ ಶಿವನ ಮೂರ್ತಿಯನ್ನು ಎಲ್ಲ ಕಡೆ ಸ್ಥಾಪಿಸುತ್ತಾರೆ. ಆದರೆ ವಿಜಯಪುರದಲ್ಲಿನ ಶಿವಮೂರ್ತಿ ಒಂಚೂರು ವಿಭಿನ್ನವಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿದೆ
Photo Credit :

ವಿಜಯಪುರ(ಬಿಜಾಪುರ):  ಸಾಮಾನ್ಯವಾಗಿ ಶಿವನ ಮೂರ್ತಿಯನ್ನು ಎಲ್ಲ ಕಡೆ ಸ್ಥಾಪಿಸುತ್ತಾರೆ. ಆದರೆ ವಿಜಯಪುರದಲ್ಲಿನ ಶಿವಮೂರ್ತಿ ಒಂಚೂರು ವಿಭಿನ್ನವಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿದೆ. ವಿಜಯಪುರದ ಶಿವಗಿರಿಯಲ್ಲಿ ಈ ಶಿವನ ಮೂರ್ತಿ ಇದ್ದು, ಮುರುಡೇಶ್ವರ ಬಿಟ್ಟರೇ ರಾಜ್ಯದ ಅತಿ ದೊಡ್ಡ‌ ಶಿವಮೂರ್ತಿ‌ ಇರೋದು ಶಿವಗಿರಿಯಲ್ಲಿ.

ಮುರ್ಡೇಶ್ವರದಲ್ಲಿರುವ ಶಿವನ ವಿಗ್ರಹ ಭಾರತದಲ್ಲಿಯೇ ವಿಶಾಲ ಹಾಗೂ ಎತ್ತರವಾದದ್ದು. ಆ ನಂತರದ ಸ್ಥಾನವನ್ನು ವಿಜಯಪುರ ಜಿಲ್ಲೆಯ ಶಿವಗಿರಿಯಲ್ಲಿರುವ ಶಿವನ ಮೂರ್ತಿ ಹೊಂದಿದೆ.ವಿಶ್ವವಿಖ್ಯಾತ ಗೋಲ್ ಗುಂಬಜ್, ಬಾರಾ ಕಮಾನ್, ಇಬ್ರಾಹಿಂ ರೋಜಾ ಅಂತಹ ಸ್ಮಾರಕಗಳ ಜೊತೆಗೆ ಈ ಶಿವನ ಮೂರ್ತಿಯೂ ವಿಜಯಪುರ ಪ್ರವಾಸೋದ್ಯಮಕ್ಕೆ ಗರಿಸಿಕ್ಕಿಸಿದಂತಿದೆ.

ಯಾರು ನಿರ್ಮಾಣ ಮಾಡಿದ್ದು

ಈ ಮೂರ್ತಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಸಂತಕುಮಾರ ಪಾಟೀಲ ಹಾಗೂ ಅವರ ಕುಟುಂಬದವರು ನಿರ್ಮಿಸಿದ್ದಾರೆ. ಶಿವಮೊಗ್ಗದ ಆರು ಜನ ಶಿಲ್ಪಿಗಳು ಒಟ್ಟು 100 ಜನ ಸಹಾಯಕರೊಂದಿಗೆ ಸುಮಾರು ಒಂದು ವರ್ಷದಲ್ಲಿ ಇದನ್ನು ನಿರ್ಮಿಸಿದ್ದಾರೆ

ಚಿನ್ನದ ಸರ ಮಾರಾಟ ಮಾಡಿ ಶಿವನ ಮೂರ್ತಿ ನಿರ್ಮಾಣ

ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ
ಬಸಂತ್ ಕುಮಾರ್ ಪಾಟೀಲ್ ಹಾಗೂ ರಾಮನಗೌಡ ಪಾಟೀಲ್ ಇವರು ಸಹಕಾರದಲ್ಲಿ ನಿರ್ಮಾಣಗೊಂಡ ಶಿವಮೂರ್ತಿ ಇದಾಗಿದೆ. ಇವರಿಬ್ಬರು ವಿಜಯಪುರದಲ್ಲಿ ಹುಟ್ಟಿ ಬೆಳೆದ ಕಾರಣ ದ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಹಂಬಲ ತೊಟ್ಟಿದ್ದರು. ಅಲ್ಲದೇ ಹೆತ್ತ ತಾಯಿಗೆ ಏನಾದರೂ ಒಂದು ಕಾಣಿಕೆ ನೀಡುವುದು ಅವರ ಬಯಕೆಯಾಗಿತ್ತು. ಆದ್ದರಿಂದ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ತನ್ನ ತಾಯಿ ನೀಡಿದ್ದ ಒಂದು ತೊಲೆ ಚಿನ್ನದ ಸರವನ್ನು ಮಾರಿ ತನ್ನ ತಾಯಿ ನೆನಪಿಗೋಸ್ಕರ ಶಿವಮೂರ್ತಿ ನಿರ್ಮಾಣ ಮಾಡಿದರು. ಸದ್ಯ ಈಗ ಇದನ್ನು ಬಸಂತ್ ಕುಮಾರ ಮಗ ಟಿ.ಕೆ ಪಾಟೀಲ್ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಎಲ್ಲಿದೆ ಈ ಬೃಹತ್ ಶಿವಮೂರ್ತಿ

ವಿಜಯಪುರ ನಗರದಿಂದ ಮೂರು ಕಿ.ಮೀ ದೂರದಲ್ಲಿ ಸಿಂದಗಿ ರಸ್ತೆಯ ಹತ್ತಿರ ಈ ಶಿವಗಿರಿ ಇದೆ. ಸುಮಾರು 18 ಎಕರೆ ವಿಸ್ತೀರ್ಣದ ಹಸಿರುವನದ ಮಧ್ಯೆ ಇದು ಇದ್ದು, ಇಲ್ಲಿಗೆ ಭೇಟಿ ನೀಡಿದರೆ ಮಂದಸ್ಮಿತವಾಗಿ ಕುಳಿತಿರುವ ಶಿವನ ಮೂರ್ತಿ ನಿಮಗೆ ಕಾಣಸಿಗುತ್ತದೆ. ಶಿವಗಿರಿಯಲ್ಲಿರುವ ಶಿವನ ಮೂರ್ತಿ ಆಕರ್ಷಿಣೀಯ ಸ್ಥಳಗಳಲ್ಲಿ ಒಂದಾಗಿದ್ದು, ದೇಶದಲ್ಲೇ ವಿಸ್ತಾರ ಹಾಗೂ ಎತ್ತರದ ಎರಡನೇ ಶಿವನ ಮೂರ್ತಿ ಇದಾಗಿದೆ.

15000 ಟನ್ ತೂಕವಿರುವ ಶಿವ

ಒಟ್ಟು 85 ಅಡಿ ಉದ್ದವಿರುವ ಈ ಶಿವನ ಮೂರ್ತಿಯನ್ನು
ಸಂಪೂರ್ಣವಾಗಿ ಸಿಮೆಂಟ್, ಸ್ಟೀಲ್ ಹಾಗೂ ಕಾಂಕ್ರೀಟ್ ನಿಂದ ನಿರ್ಮಿಸಲಾಗಿದೆ. ಈ ದೈತ್ಯ ಶಿವನ ಮೂರ್ತಿಯು ಅಂದಾಜು 1500 ಟನ್ ತೂಕವನ್ನು ಹೊಂದಿದೆ. ಶಿವನು ಧರಿಸಿದ ಪ್ರತಿಯೊಂದು ರುದ್ರಾಕ್ಷಿಯು 50 ಕೆ.ಜಿ. ತೂಕವನ್ನು ಹೊಂದಿದ್ದು, 1.5 ಅಡಿ ವ್ಯಾಸವುಳ್ಳವಾಗಿದೆ. ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ. ಈ ಶಿವನ ಮೂರ್ತಿಯು 2006ರಲ್ಲಿ ಪ್ರತಿಷ್ಠಾಪನೆಗೊಂಡಿತು. ಬೆಳಿಗ್ಗೆ 7ರಿಂದ ಸಂಜೆ 8 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.

ಭಕ್ತರುಬಕಲಿಯಲುಪೌರಾಣಿಕ ಕಥೆ

ಶಿವಲಿಂಗದ ಸಣ್ಣ ವಿಗ್ರಹವನ್ನು ದೊಡ್ಡ ಪ್ರತಿಮೆಯ ಕೆಳಗೆ ಸ್ಥಾಪಿಸಲಾಗಿದೆ. ಶಿವನಿಗೆ ಸಂಬಂಧಿಸಿದ ಪೌರಾಣಿಕ ಕಥೆಗಳನ್ನು ಭಕ್ತರು ಕಲಿಯಲು ಸಹಾಯವಾಗುವಂತೆ “ಶಿವ ಚರಿತನ್ನು ದೇವಾಲಯದ ಒಳ ಗೋಡೆಗಳ ಮೇಲೆ ಕನ್ನಡದಲ್ಲಿ ಕೆತ್ತಲಾಗಿದೆ.

ಶಿವರಾತ್ರಿಯೆಂದು ಶಿವನಿಗೆ ವಿಶೇಷ ಪೂಜೆ

ಶಿವರಾತ್ರಿಯಂದು ಶಿವಗಿರಿಯಲ್ಲಿನ ಪೂಜೆ
ಮಹಾಶಿವರಾತ್ರಿಯಂದು ಶಿವಗಿರಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಈ ವೇಳೆ ಶಿವಗಿರಿ ದೇವಸ್ಥಾನದಲ್ಲಿ ಶಿವನಿಗೆ ಹೂವು, ಹಣ್ಣು, ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಭಜನಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಗಳನ್ನು ಮಹಾಶಿವರಾತ್ರಿಯಂದು ಆಯೋಜಿಸಲಾಗುತ್ತದೆ. ಇಷ್ಟಾರ್ಥಸಿದ್ಧಿಗಾಗಿ ಭಕ್ತರು ಉಪವಾಸ ಮಾಡಲಿದ್ದಾರೆ.

ಇಲ್ಲಿ ಏನೇನಿದೆ

ಪ್ರವಾಸಿಗರಲ್ಲಿ ಶಾಲಾ ಮಕ್ಕಳು ವಯೋ ವೃದ್ಧರು ನೋಡುವ ಪ್ರವಾಸಿ ತಾಣ ಶಿವಗಿರಿಯಾಗಿದೆ. ಇಲ್ಲಿ ಚಿಕ್ಕ ಮಕ್ಕಳನ್ನು ಆಟವಾಡಿಸಲು ಪುಟಾಣಿ ರೈಲು ಹಡಗು ಇನ್ನಿತರ ಆಟಿಕೆಗಳು ಇದೆ. ಇವುಗಳು ಪ್ರವಾಸಿಗರ ಆಕರ್ಷಣೆಯಾಗಿವೆ.. ಇನ್ನೂ ಬುದ್ಧ ಬಸವ ಅನೇಕ ಮೂರ್ತಿಗಳು ಪ್ರವಾಸಿಗರ ಕೇಂದ್ರ ಬಿಂದುಗಳಾಗಿವೆ.
ಶಿವನ ಮೂರ್ತಿಯ ಎದುರಿಗೆ ನಂದಿ ಕೂಡ ಸ್ಥಾಪನೆ ಮಾಡಲಾಗಿದೆ.

ಶಿವಗಿರಿ ತಲುಪುವುದು ಹೇಗೆ?

ಶಿವಗಿರಿಗೆ ಭೇಟಿ ನೀಡುವವರು ವಿಜಯಪುರ ಬಸ್ ನಿಲ್ದಾಣಕ್ಕೆ ಬಸ್‌ ಮೂಲಕ ಪ್ರಯಾಣ ಮಾಡಬಹುದು. ವಿಜಯಪುರ ಬಸ್ ನಿಲ್ದಾಣದಿಂದ ಶಿವಗಿರಿಗೆ ತುಂಬಾ ಹತ್ತಿರವಾಗುತ್ತದೆ. ಜೊತೆಗೆ ಇಲ್ಲಿನ ರೈಲು ನಿಲ್ದಾಣವು ಬೆಂಗಳೂರು, ಮುಂಬೈ ಮತ್ತು ಇತರ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಬೇರೆ ರಾಜ್ಯಗಳಿಂದ ಭಕ್ತರು ವಿಮಾನದಲ್ಲಿ ಭೇಟಿ ನೀಡಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53535
ರಜಾಕ್ ಸಾಬ್ ಎಸ್.ಹೊರಕೇರಿ

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು