News Karnataka Kannada
Friday, May 03 2024
ವಿಜಯಪುರ

ವಿಜಯಪುರ: ಗ್ರಾಮ ಪಂಚಾಯತಿಗಳಲ್ಲಿ ಆನ್ ಲೈನ್ ಮೂಲಕ ತೆರಿಗೆ ಪಾವತಿಗೆ ಅವಕಾಶ

Vijayapura: Gram panchayats will be allowed to pay taxes online.
Photo Credit : News Kannada

ವಿಜಯಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಸೇವೆಗಳನ್ನು ತ್ವರಿತವಾಗಿ ಆನಲೈನ್ ಮೂಲಕ ಒದಗಿಸಲು ಬಾಪೂಜಿ ಸೇವಾ ಕೇಂದ್ರ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ, ಅನುಷ್ಠಾನಗೊಳಿಸಲಾಗಿದೆ. ಅದರ ಮುಂದಿನ ಭಾಗವಾಗಿ ಈಗ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದ ಮೂಲಕ ಸಾರ್ವಜನಿಕರು ಗ್ರಾಮ ಪಂಚಾಯತಿಯ ಆಸ್ತಿ ತೆರಿಗೆಯನ್ನು ಮತ್ತು ಸೇವೆಗಳಿಗೆ ಸಂಬಂಧಿಸಿದ ಶುಲ್ಕಗಳನ್ನು ಆನ್ ಲೈನ್ ಮೂಲಕ ಪಾವತಿಸಲು ಸರಕಾರದಿಂದ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಪಾವತಿಯ ಪ್ರಕ್ರಿಯೆಯಲ್ಲಿ ಸರಳತೆ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡದೇ Phonepay, Google pay, PayTm, Amazon Pay, BHIM UPI ಮತ್ತು ಮುಂತಾದ ವಿಧಾನದ ಮೂಲಕ ಆಸ್ತಿ ತೆರಿಗೆ ಪಾವತಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ, ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆಯನ್ನು ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದ ಮೂಲಕ ಮತ್ತು ಮೊಬೈಲ್ ಆ್ಯಪ ಬಳಸಿಕೊಂಡು ಈ ಮೇಲಿನ ವಿಧಾನಗಳ ಮೂಲಕ ತೆರಿಗೆ ಪಾವತಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಸಾ್ರ್ವಜನಿಕರು ಇದರ ಲಾಭ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

https://panchatantra.karnataka.gov.in/USER_MODULE/userLogin/loadPanchamitra ಈ ಪೋರ್ಟಲನಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವಿವರ ಪಡೆಯಬಹುದಾಗಿದೆ.

ಬಾಪೂಜಿ ಸೇವಾ ಕೇಂದ್ರ ತತ್ರಾಂಶದ ಮೂಲಕ ತೆರಿಗೆ ಪಾವತಿಸುವ ವಿಧಾನ.

* https://bsk.karnataka.gov.in ಈ ಯು.ಆರ್.ಎಲ್ ಬಳಸಿ
* ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಕಿ ನೋಂದಣಿ ಮಾಡಿಕೊಳ್ಳುವುದು.
* ನಂತರ ನೊಂದಣಿಯಾದ ಮೊಬೈಲ್ ಸಂಖ್ಯೆಯಲ್ಲಿ ಬರುವ ಒಟಿಪಿಯನ್ನು ದಾಖಲಿಸಿ ನೋಂದಣಿಯನ್ನು ಪೂರ್ಣಗೊಳಿಸಬೇಕು.

* ನಂತರ, ಲಾಗಿನ್ ಪೆಜಗೆ ತೆರಳಿ ನೊಂದಣಿಯಾದ ಮೊಬೈಲ್ ಸಂಖ್ಯೆ ದಾಖಲಿಸಿ ಒಟಿಪಿ ಮೂಲಕ ಲಾಗಿನ
ಆಗಬೇಕು.
* ಆಸ್ತಿ ತೆರಿಗೆ ಪಾವತಿ (Pay Property Tax) ಮೇಲೆ ಕ್ಲಿಕ್ ಮಾಡಿ ಸಂಬಂದಪಟ್ಟ ಗ್ರಾಮ
ಪಂಚಾಯಿತಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವುದು.
* ತಮ್ಮ 18 ಸಂಖ್ಯೆಯ ಆಸ್ತಿ ಸಂಖ್ಯೆಯನ್ನು ನಮೊದಿಸಿ ತೆರಿಗೆ ಪಾವತಿಸಬಹುದು.
* ಮೇಲಿನ ಯು.ಆರ್.ಎಲ್ ನಲ್ಲಿ ಲಭ್ಯವಿರುವ ಬಳಕೆದಾರರ ಕೈಪಿಡಿ ಡೌನಲೋಡ ಮಾಡಿಕೊಂಡು
ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ರಾಹುಲ ಶಿಂಧೆ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು