News Karnataka Kannada
Saturday, April 27 2024
ವಿಜಯಪುರ

ಈ ಲೋಕಸಭೆ ಚುನಾವಣೆ ಕಾಂಗ್ರೆಸ್ ಪರ ಹೆಜ್ಜೆ ಗುರುತಾಗಲಿದೆ : ಎಂ.ಬಿ. ಪಾಟೀಲ್ ಭರವಸೆ,

ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ಮತ್ತು ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಾಣಲಿದೆ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಿಶ್ವಾಸದಿಂದ ಹೇಳಿದರು.
Photo Credit : NewsKarnataka

ವಿಜಯಪುರ: ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ಮತ್ತು ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಾಣಲಿದೆ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಿಶ್ವಾಸದಿಂದ ಹೇಳಿದರು. ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಪರ ಬುಧವಾರ ನಗರದ ಕಿತ್ತೂರು ಚೆನ್ನಮ್ಮ ಭವನದಲ್ಲಿ ನಡೆದ ಜಿಲ್ಲೆಯ ಪಕ್ಷದ ಮುಖಂಡರು, ಪದಾಧಿಕಾರಿಗಳ ಮಹತ್ವದ ಸಭೆಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಬಹುತೇಕ ಭರವಸೆಯನ್ನು ಈಡೇರಿಸಿದ್ದಾರೆ. ಕಳೆದ ಬಿಜೆಪಿಯ ಯಡಿಯೂರಪ್ಪರ ಸರಕಾರ ನೀಡಿದ್ದ ಆರು ನೂರು ಭರವಸೆಯಲ್ಲಿ ಐದು ನೂರಕ್ಕೂ ಹೆಚ್ಚು ಭರವಸೆಗಳು ಹಾಗೇ ಉಳಿದಿವೆ. ಇದಲ್ಲದೇ ದೇಶದಲ್ಲಿ ಸಾಮಾನ್ಯರ ಜೀವನ ಸ್ಥಿತಿ ಚಿಂತಾಜನಕವಾಗಿದ್ದು, ಇದೆಲ್ಲ ಮರೆ ಮಾಚಲು ಬರೀ ಭಾವನಾತ್ಮಕ ವಿಚಾರಗಳನ್ನು ಅವರು ಎತ್ತುತ್ತಿದ್ದಾರೆ. ಜನರಿಗೆ ಇವರ ಆಟ ಆರ್ಥವಾಗಿದೆ ಎಂದು ಟೀಕಿಸಿದರು.

ರಾಜು ಆಲಗೂರ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಇವರ ಬೆನ್ನಿಗೆ ನಮ್ಮ ಗ್ಯಾರಂಟಿಗಳ ಅಭಯವಿದೆ. ರಾಜ್ಯ ಸರಕಾರದ ಜನಪರ ಆಡಳಿತದ ಬೆಂಬಲವಿದೆ. ಚುನಾವಣೆಯಲ್ಲಿ ಧೈರ್ಯವಾಗಿ ಮತ ಕೇಳುವ ನೈತಿಕ ಹಕ್ಕು ನಮಗಿದೆ. ಪಕ್ಷದ ಎಲ್ಲರೂ ಸಂಘಟಿತರಾಗಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಬಹು ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಗೆಲ್ಲುವ ಕಾಲ ಕೂಡಿ ಬಂದಿದೆ ಎಂದು ಹೇಳಿದರು.

ರಾಜು ಆಲಗೂರ್ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮನ್ನು ಬೆಂಬಲಿಸಲು ಕೋರಿದರು. ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕದೊಂಡ, ಸುನೀಲಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಮಕ್ಬೂಲ್ ಬಾಗವಾನ, ಹಮೀದ್ ಮುಶ್ರೀಫ್, ಕಾಂತಾ ನಾಯಕ, ವಿದ್ಯಾರಾಣಿ ತುಂಗಳ, ಸುಭಾಶ ಛಾಯಾಗೋಳ, ಡಿ.ಎಲ್. ಚೌಹಾಣ್, ಮಲ್ಲಣ್ಣ ಸಾಲಿ, ಅರ್ಜುನ ರಾಠೋಡ, ಸುಜಾತಾ ಕಳ್ಳಿಮನಿ, ಎಸ್.ಎಂ.ಪಾಟೀಲ ಗಣಿಹಾರ, ಆರ್.ಆರ್.ಪಾಟೀಲ, ಬಸವರಾಜ ದೇಸಾಯಿ, ಸಿದ್ದು ಗೌಡನವರ, ಈರನಗೌಡ ಬಿರಾದಾರ, ಇಲಿಯಾಸ ಬೋರಾಮಣಿ, ಅಬ್ದುಲ್ ರಜಾಕ್ ಹೊರ್ತಿ, ಕನ್ನಾನ ಮುಶ್ರಿಫ್, ಆರತಿ ಶಹಾಪುರ, ಬಿ. ಎಸ್. ಪಾಟೀಲ ಯಾಳಗಿ, ಟಪಾಲ್ ಎಂಜಿನಿಯರ್ ಸೇರಿದಂತೆ ನಗರ ಪಾಲಿಕೆ ಸದಸ್ಯರು, ವಿಡಿಎ ಅಧ್ಯಕ್ಷರು, ಸದಸ್ಯರು, ಜಿಲ್ಲೆಯ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು ಅನೇಕರಿದ್ದರು. ಸಂಗಮೇಶ ಬಬಲೇಶ್ವರ ಸ್ವಾಗತಿಸಿದರು, ಶಬ್ಬೀರ್ ಜಾಹಗೀರದಾರ ನಿರೂಪಿಸಿದರು.

ಬಾಕ್ಸ್

ನಮ್ಮ ಕೆಲಸವೇ ನಮಗೆ ‘ಗ್ಯಾರಂಟಿ’!
ಇದು ಸವಾಲಿನ ಚುನಾವಣೆ, ಈ ಸಲ ನಮ್ಮ ಅಭಿವೃದ್ಧಿ ಕಾರ್ಯಗಳೇ ನಮಗೆ ಗೆಲುವಿನ ‘ಗ್ಯಾರಂಟಿ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕರು ಹೇಳಿದರು. ಆರು ಜನ ಶಾಸಕರಿದ್ದು, ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ. ಬಿಜೆಪಿಗೆ ಸುಳ್ಳೇ ಬಂಡವಾಳ, ಕಾಂಗ್ರೆಸ್‌ಗೆ ಜನಪರ ಕೆಲಸಗಳೇ ಆಧಾರ ಎಂದು ಸಭೆಯಲ್ಲಿದ್ದ ನಾಲ್ವರು ಶಾಸಕರು ಹೇಳಿದರು. ಬೂತ್ ಮಟ್ಟದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ನಿರ್ಧರಿಸಲಾಯಿತು.

ಕೋಟ್
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದನ್ನು ನಾವು ಹೇಳುತ್ತಿಲ್ಲ, ಬಿಜೆಪಿಗೆ ಅಡಿಪಾಯ ಹಾಕಿದ ದೊಡ್ಡ ನಾಯಕರೇ ಹೇಳಿದ್ದಾರೆ. ಇದು ನೂರಾ ನಲವತ್ತು ಕೋಟಿ ಜನರ ಭವಿಷ್ಯ ನಿರ್ಮಿಸುವ ಚುನಾವಣೆ.
-ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು