News Karnataka Kannada
Wednesday, April 24 2024
Cricket
ವಿಜಯಪುರ

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಪಠ್ಯಪುಸ್ತಕದಲ್ಲಿ ಅಳವಡಿಸಲು ಆಗ್ರಹ

The tragic end of a man who was giving the sto show with a live cobra around his neck
Photo Credit : News Kannada

ವಿಜಯಪುರ: ಸರ್ವಜನಾಂಗದ ಶಾಂತಿಯ ತೋಟವಾದ ನಮ್ಮ ಕನ್ನಡ ನಾಡಿನಲ್ಲಿ ಆ ಶಾಂತಿಯು ಶಾಶ್ವತವಾಗಿ ನೆಲೆಸಿರಲಿ ಎಂಬ ಏಕೈಕ ಉದ್ದೇಶದಿಂದ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರದ ಸಮಯದಲ್ಲಿ ಅಳವಡಿಸಲಾಗಿದ್ದ ಕೆಲ ಪಠ್ಯಗಳನ್ನು ಕೈಬಿಟ್ಟು, ಅಲ್ಲದೇ ಕೆಲವು ಪಠ್ಯಗಳನ್ನು ಸೇರ್ಪಡೆ ಸಹ ಮಾಡುತ್ತಿದೆ.

ಬಸವನಾಡು ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಶ್ವೇತವಸ್ತçಧಾರಿ ಸಂತ, ನಡೆದಾಡುವ ದೇವರು, ಎರಡನೇ ವಿವೇಕಾನಂದ, ಆಧುನಿಕ ಬಸವಣ್ಣ, ಪ್ರವಚನದ ಪವಾಡ ಪುರುಷ ಎಂದೆಲ್ಲಾ ಮನೆ ಮನೆ ಮಾತಾಗಿದ್ದ ಲಿಂಗೈಕ್ಯ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂಬ ಆಗ್ರಹ, ಮಾತುಗಳು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಸಾರ್ವಜನಿಕ ವಲಯ ಹಾಗೂ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿವೆ. ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜೀವನ ಚರಿತ್ರೆಯನ್ನು ಶಾಲಾ ಮಕ್ಕಳಿಗೆ ಪಠ್ಯವಾಗಿಸಬೇಕು ಎಂಬ ಆಗ್ರಹ ಬಲವಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಸೇರಿದಂತೆ ಅನೇಕ ನಾಯಕರೂ ಪಕ್ಷಾತೀತವಾಗಿ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಪಠ್ಯದಲ್ಲಿ ಅಳವಡಿಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.

ನಡೆದಾಡುವ ದೇವರು ಎಂದು ಪ್ರಖ್ಯಾತರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ಅವರು ವಿಶ್ವದ ಜ್ಞಾನಕೋಶದಂತಿದ್ದರು. ಅವರು ಜ್ಞಾನ ದಾಸೋಹದಿಂದ ಇಡೀ ವಿಶ್ವದ ಜನತೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸತ್ಯ, ಧರ್ಮ, ನ್ಯಾಯ, ನೀತಿಯ ದಾರಿಯಲ್ಲಿ ಬಾಳುತ್ತಿದ್ದಾರೆ. ಅಂತಹ ಮಹಾತ್ಮರನ್ನು ಎರಡನೇ ವಿವೇಕಾನಂದ ಎಂದು ಕರೆದರೂ ತಪ್ಪಾಗಲಾರದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿಯವರು ನಿಸರ್ಗದಲ್ಲಿನ ಚರಾಚರ ವಸ್ತುಗಳನ್ನು ಪ್ರೀತಿಸುತ್ತಿದ್ದರು. ದೇವರನ್ನು ನಿಸರ್ಗದಲ್ಲಿ ಪ್ರತಿ ಜೀವಿಗಳಲ್ಲಿ ಕಾಣಿ ಎಂಬ ಸಂದೇಶ ಸಾರಿದವರು. ಇಂದಿನ ಯುವ ಪೀಳಿಗೆ ಒಳ್ಳೆಯ ದಾರಿಯಲ್ಲಿ ಸಾಗಬೇಕಾದರೆ ಇಂತಹ ದಾರ್ಶನಿಕರ, ಮಹಾಪುರುಷರ ಜೀವನ ಆಧಾರಿತ ಹಾಗೂ ಪ್ರವಚನ ಸಾರಾಂಶಗಳನ್ನು ರಾಜ್ಯ ಸರ್ಕಾರ ಪಠ್ಯದಲ್ಲಿ ಅಳವಡಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಕೆಲ ತಿಂಗಳ ಹಿಂದೆ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ನಮ್ಮನ್ನಗಲಿದ ಸಂದರ್ಭದಲ್ಲಿ ಜಿಲ್ಲೆಯ ಹಾಲಿ ಉಸ್ತುವಾರಿ ಸಚಿವರು ಹಾಗೂ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್, ಕಾಂಗ್ರೆಸ್ ಮುಖಂಡ ಹಮೀದ್ ಮುಸ್ರೀಫ್ ಸೇರಿದಂತೆ ಜಿಲ್ಲೆಯ ಇನ್ನೂ ಅನೇಕ ನಾಯಕರು, ಸಾಹಿತಿಗಳು, ಚಿಂತಕರು, ಪ್ರಜ್ಞಾವಂತರು ಪಠ್ಯದಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಪಾಠ ಅಳವಡಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೀಗ ಮತ್ತೆ ವಿಜಯಪುರದ ಜ್ಞಾನಯೋಗಾಶ್ರಮ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಜೀವನ ಶಾಲಾ ಮಕ್ಕಳಿಗೆ ಪಠ್ಯವಾಗಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬರುತ್ತಿದೆ. ಸಿದ್ದೇಶ್ವರ ಶ್ರೀಗಳ ಅಸಂಖ್ಯ ಭಕ್ತಜನರು ಸಿದ್ದೇಶ್ವರ ಶ್ರೀಗಳ ಜೀವನ ಚರಿತ್ರೆ ಮಕ್ಕಳಿಗೆ ಪಠ್ಯವಾಗಲಿ ಎಂದು ಆಗ್ರಹಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸಿದ್ದೇಶ್ವರ ಶ್ರೀಗಳು ತಮ್ಮ ನಿರ್ಗಮನಕ್ಕೂ ಮೊದಲು ಮಾಡಿಟ್ಟ ವಿಲ್, ಅವರ ಇಡೀ ಅಧ್ಯಯನದ ಬದುಕು, ಅವರ ಹಿತಪ್ರವಚನಗಳನ್ನು ಶಾಲಾ ಮಕ್ಕಳು ಓದಬೇಕು. ಹೀಗಾಗಿ ಸಿದ್ದೇಶ್ವರ ಶ್ರೀಗಳ ಬದುಕನ್ನು ಪಠ್ಯ ರೂಪದಲ್ಲಿ ಶಾಲಾಮಕ್ಕಳಿಗೆ ಉಣಬಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿದ್ದೇಶ್ವರ ಶ್ರೀಗಳು ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ಸರಳತೆಗೆ ಅವರು ಇನ್ನೊಂದು ಹೆಸರಾಗಿದ್ದರು. ಸಂತನೆAದರೆ ಯಾರು? ಅಂತAದ್ರೆ ಅದು ಸಿದ್ದೇಶ್ವರ ಶ್ರೀಗಳು ಎಂಬAತಿದ್ದರು. ಸಿದ್ದೇಶ್ವರ ಶ್ರೀಗಳು ಎಂದೂ ಆಡಂಬರ ಬಯಸಲಿಲ್ಲ. ದೊಡ್ಡದೊಡ್ಡ ವಾಹನಗಳನ್ನು ಇಟ್ಟುಕೊಳ್ಳಲಿಲ್ಲ. ಭಕ್ತಜನರ ಸಾಧಾರಣ ಕಾರುಗಳಲ್ಲೇ ಪ್ರಯಾಣ ಬೆಳೆಸಿ ಪ್ರವಚನ ನೀಡಿ ಬರುತ್ತಿದ್ದರು. ಬಿಳಿಯ ಪಂಚೆ, ಬಿಳಿಯ ಸಾಧಾರಣ ನೀಲುವಂಗಿ ಧರಿಸುತ್ತಿದ್ದರು. ಕಾವಿಯನ್ನು ಮುಟ್ಟಲೇ ಇಲ್ಲ. ಕಾಲಲ್ಲಿ ಹವಾಯಿ ಚಪ್ಪಲಿ ಧರಿಸುತ್ತಿದ್ದರು. ಜ್ಞಾನಯೋಗಾಶ್ರಮದಲ್ಲಿ ಕಟ್ಟಡಗಳಿದ್ದರೂ ಯಾವತ್ತು ದೊಡ್ಡ ಕಟ್ಟಡಗಳಲ್ಲಿ ವಾಸ್ತವ್ಯ ಉಳಿಯಲಿಲ್ಲ. ಅವರಿಗಾಗಿಯೆ ದೊಡ್ಡ ಕಟ್ಟಡಗಳು ನಿರ್ಮಾಣವಾದರೂ ಒಂದು ದಿನವೂ ಅಲ್ಲಿ ಉಳಿದುಕೊಳ್ಳಲಿಲ್ಲ. ಚಿಕ್ಕ ಕೋಣೆಯೊಂದರಲ್ಲೇ ವಾಸವಾಗಿದ್ದರು ಇಂತಹ ಸರಳತೆಯ ಸಾಕಾರ ಮೂರ್ತಿಯ ಪಠ್ಯವನ್ನು ಮಕ್ಕಳಿಗೆ ಬೋಧಿಸಬೇಕು ಎಂಬುದು ಅವರ ಅಸಂಖ್ಯ ಭಕ್ತಜನರ ಆಶಯವಾಗಿದೆ.

ಇನ್ನು ಸಿದ್ದೇಶ್ವರ ಶ್ರೀಗಳ ಆದರ್ಶಮಯ ಬದುಕನ್ನು ಶಾಲಾ ಮಕ್ಕಳಿಗೆ ಪಾಠವಾಗಿ ಬೋಧಿಸಬೇಕು ಎಂದು ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು ಕೂಡ ಆಗ್ರಹಿಸಿದ್ದಾರೆ. ಶಾಲಾ ಮಕ್ಕಳು ನಿಜಕ್ಕು ಸಿದ್ದೇಶ್ವರ ಶ್ರೀಗಳ ಬದುಕನ್ನು ಅರಿತುಕೊಳ್ಳಬೇಕು. ಸಿದ್ದೇಶ್ವರ ಶ್ರೀಗಳ ಬದುಕನ್ನು ಮಕ್ಕಳು ಓದಿದರೆ ಮಕ್ಕಳ ಶೈಕ್ಷಣಿಕ ಬದುಕಿನಲ್ಲೂ ಅಸಾಮಾನ್ಯ ಬದಲಾವಣೆ ಬರಲಿದೆ. ಸರ್ಕಾರ ಈ ಬಗ್ಗೆ ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪರಮಪೂಜ್ಯ ಸಿದ್ದೇಶ್ವರ ಶ್ರೀಗಳು ಅಪಾರ ಜ್ಞಾನವನ್ನು ಹೊಂದಿದವರಾಗಿದ್ದರು. ತಮ್ಮ ಹಿತನುಡಿಗಳ ಮೂಲಕ ಇಡೀ ಪ್ರಪಂಚಕ್ಕೆ ಚಿರಪರಿಚಿತರಾಗಿದ್ದಾರೆ. ಇಷ್ಟೇ ಅಲ್ಲದೆ ಈ ನಾಡಿನಲ್ಲಿ ಪ್ರವಚನಗಳ ಮೂಲಕ ಸಮಾಜದಲ್ಲಿನ ಜನತೆಯನ್ನು ಸನ್ಮಾರ್ಗದ ಬದುಕಿ ನಡೆಗೆ ಪರಿವರ್ತಿಸಿದಂತಹ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಬಸವಲಿಂಗ ಸ್ವಾಮೀಜಿಯವರು ಸ್ಮರಿಸಿದ್ದಾರೆ.

ಮಕ್ಕಳೆಂದರೆ ಸಿದ್ದೇಶ್ವರ ಶ್ರೀಗಳಿಗೆ ಅಪಾರವಾದ ಗೌರವ, ಪ್ರೀತಿ ಇತ್ತು. ಅಂತೆಯೇ ಮಕ್ಕಳಿಗೂ ಶ್ರೀಗಳ ಮೇಲೆ ಎಲ್ಲಿಲ್ಲದ ಪ್ರೀತಿ, ಗೌರವ. ಇದೀಗ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತಿರುವ ವಿಚಾರ ತಿಳಿದು ಬಂದಿದ್ದು, ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣ ಸೇರಿದಂತೆ ಯಾವುದರಲ್ಲಾದರೂ ಒಂದು ಸಿದ್ದೇಶ್ವರ ಶ್ರೀಗಳ ಜೀವನದ ಕುರಿತಾಗಿ ಅಳವಡಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಹೀಗೆ ಬಸವನಾಡು ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಶ್ವೇತವಸ್ತçಧಾರಿ ಸಂತ, ನಡೆದಾಡುವ ದೇವರು, ಎರಡನೇ ವಿವೇಕಾನಂದ, ಆಧುನಿಕ ಬಸವಣ್ಣ, ಪ್ರವಚನದ ಪವಾಡ ಪುರುಷ ಎಂದೆಲ್ಲಾ ಮನೆ ಮನೆ ಮಾತಾಗಿದ್ದ ಲಿಂಗೈಕ್ಯ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂಬ ಆಗ್ರಹ, ಮಾತುಗಳು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಸಾರ್ವಜನಿಕ ವಲಯ ಹಾಗೂ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿರುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿದ್ದೇಶ್ವರ ಶ್ರೀಗಳ ಅಸಂಖ್ಯ ಅಭಿಮಾನಿಗಳು ಹಾಗೂ ಅನುಯಾಯಿಗಳು, ಭಕ್ತಜನರು “ಪ್ರವಚನದ ಪವಾಡ ಪುರುಷನನ್ನು ಪಠ್ಯಕ್ಕೆ ಸೇರಿಸಿ” ಎಂಬರ್ಥದಲ್ಲಿ ಅಭಿಯಾನದಂತೆ ಪೋಸ್ಟ್ ಹಾಕುತ್ತಿರುವುದು ಕಂಡು ಬರುತ್ತಿದೆ. ಸದ್ಯ ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಕೈಗೊಂಡಿರುವ ಸಂದರ್ಭದಲ್ಲಿ ಈ ಆಗ್ರಹವು ಅತ್ಯಂತ ಮಹತ್ವ ಪಡೆದುಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು