News Karnataka Kannada
Saturday, April 13 2024
Cricket
ಹಾಸನ

ಬ್ಯಾಂಕ್ ನೌಕರನ ಬಂಧನ: ೭೭ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

Bank employee arrested, gold ornaments worth Rs 77 lakh seized
Photo Credit : News Kannada

ಹಾಸನ: ಎಸ್‌ಬಿಐ ಬ್ಯಾಂಕ್ ನಲ್ಲಿ ಅಡವಿಟ್ಟೆ ಚಿನ್ನಾಭರಣವನ್ನು ಕದ್ದು ಕರ್ತವ್ಯ ಲೋಪ ವೆಸಗಿದವನನ್ನು ಬಂಧಿಸಿ ೭೭.೯೩ ಲಕ್ಷ ಮೌಲ್ಯದ ೧,೪೧೭ ಗ್ರಾಮ್ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಹಾರಿರಾಮ್ ಶಂಕರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಪ್ರಕರಣ ಸಂಬಂಧ ಆರೋಪಿ ಹೊರಗುತ್ತಿಗೆ ನೌಕರ ಲವ (೩೯) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈತ ಬೆಳವಾಡಿ ಗ್ರಾಮದವನಾಗಿದ್ದು ಎಸ್‌ಬಿಐ ಬ್ಯಾಂಕಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಿಂದಿನಿಂದಲೂ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಹಾಗೂ ಸಿಬ್ಬಂದಿಗಳೊಂದಿಗೆ ವಿಶ್ವಾಸವನ್ನು ಇಟ್ಟುಕೊಂಡಿದ್ದ ಈತ ಖಾತೆ ತೆರೆಯುವ ಫಾರ್ಮ್ ಮತ್ತು ಚಿನ್ನದ ಸಾಲದ ದಾಖಲೆಗಳನ್ನು ನಿರ್ವಹಿಸುತ್ತಿದ್ದ.

ಬ್ಯಾಂಕಿನ ಶಾಖೆಗೆ ಗ್ರಾಹಕರು ಚಿನ್ನದ ಸಾಲ ಪಡೆಯಲು ಭೇಟಿ ನೀಡಿದಾಗ ಬ್ಯಾಂಕಿನ ನಗದು ಅಧಿಕಾರಿ ಕಿಶೋರ್ ಕುಮಾರ್ ಹಾಗೂ ಸುರೇಶ್ ಎಂಬುವರನ್ನು ಕರೆಸಿಕೊಂಡು ಚಿನ್ನವನ್ನು ಪರಿಶೀಲಿಸಿ ನಂತರ ಖಾತೆ ತೆರೆಯುವ ಫಾರ್ಮ್ ಮತ್ತು ಚಿನ್ನದ ಸಾಲದ ದಾಖಲೆಯನ್ನು ತಯಾರಿಸಲು ಮತ್ತು ಅವುಗಳನ್ನು ಚಿನ್ನದ ಸಾಲದ ಪ್ಯಾಕೆಟ್ಗಳೊಂದಿಗೆ ಸೇರಿಸಿ ಪ್ಯಾಕ್ ಮಾಡಲು ಲವ ಅವರಿಗೆ ಕೊಡುತ್ತಿದ್ದರು .

ನಗದು ಅಧಿಕಾರಿಯದ ಕಿಶೋರ್ ಕುಮಾರ್ ಬೇರೆ ಕಡೆ ವರ್ಗಾವಣೆಯಾಗಿದ್ದರಿಂದ ೨೦೨೩ ಮೇ ೫ ರಂದು ಬ್ಯಾಂಕಿನಲ್ಲಿದ್ದ ಚಿನ್ನದ ಪ್ಯಾಕೆಟ್ಗಳನ್ನು ಪರಿಶೀಲಿಸಿದಾಗ ೩೦ ಚಿನ್ನದ ಪ್ಯಾಕೆಟ್ ಗಳಲ್ಲಿ ವ್ಯತ್ಯಾಸವಿರುವುದ ಕಂಡು ಬಂದಿದೆ.

ಲವ ಗಿರವಿ ಇಡಲಾದ ಆಭರಣಗಳೊಂದಿಗೆ ವ್ಯವಹರಿಸುವಾಗ ನಿಯಮಗಳನ್ನು ಪಾಲನೆ ಮಾಡದೆ ಉದ್ದೇಶಪೂರ್ವಕವಾಗಿ ಚಿನ್ನದ ಆಭರಣಗಳನ್ನು ನಕಲಿ ಆಭರಣಗಳಾಗಿ ಬದಲಾಯಿಸಿ. ಸುಮಾರು ೯೪ ಲಕ್ಷ ಮೊತ್ತದಷ್ಟು ನಷ್ಟವನ್ನುಂಟು ಮಾಡಿರುವ ಹಿನ್ನೆಲೆಯಲ್ಲಿ ಲವ ವಿರುದ್ಧ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಅನುರಾಧ.ಟಿ ಅವರು ೨೦೨೩ ಜೂನ್ ೧೪ರಂದು ನೀಡಿದ ದೂರಿನ ಅನ್ವಯ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ನಂತರ ಸಿಪಿಐ ರಘುಪತಿ, ಡಿ ವೈ ಎಸ್ ಪಿ ಮುರಳಿಧರ್, ಎ ಎಸ್ ಪಿ ತಮ್ಮಯ್ಯ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡು ೨೦೨೩ ಜೂನ್ ೧೭ರಂದು ಬೆಳಗ್ಗೆ ೫:೩೦ ಸಮಯದಲ್ಲಿ ಚನ್ನಪಟ್ಟಣ ವೃತ್ತದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ನಂತರ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂ ಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ ಪಿ ತಿಳಿಸಿದರು.ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ೨೦,೦೦೦ ನಗದು ಬಹುಮಾನ ಘೋಷಣೆ ಮಾಡಿರುವುದಾಗಿ ಎಸ್‌ಪಿ ತಿಳಿಸಿದರು.

ಸಂಚಾರಿ ನಿಯಂತ್ರಣ: ಸಿಬ್ಬಂದಿ ನಿಯೋಜನೆ
ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂಚಾರಿ ನಿಯಮ ಪಾಲನೆ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರರಿಂದ -ನಾಲ್ಕು ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ಎಸ್ ಪಿ ಹೇಳಿದರು.
ಈ ಸಿಬ್ಬಂದಿಗಳಿಗೆ ಇಂತಿಷ್ಟು ಗಂಟೆ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ. ಅರಸೀಕೆರೆ, ಚನ್ನರಾಯಪಟ್ಟಣ, ಸಕಲೇಶಪುರ ಹೊಳೆನರಸೀಪುರ ಸೇರಿದಂತೆ ಎಲ್ಲಾ ತಾಲೂಕಿನಲ್ಲಿಯೂ ಸಂಚಾರಿ ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಕಾಂಟ್ಯಾಕ್ಟ್ ಲೆಸ್ ಚಲನ್ ನೀಡುವ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದು ಮುಂದಿನ ಕೆಲದಿನಗಳಲ್ಲಿ ಸಂಪೂರ್ಣ ಜಾರಿ ಬರಲಿದೆ ಎಂದು ಹೇಳಿದರು.

ಸ್ಥಳದಲ್ಲಿ ನೋ ಪಾರ್ಕಿಂಗ್ ಹಾಗೂ ಇತರೆ ನಾಮಫಲಕ್ಕುಗಳನ್ನು ಹಾಕುವ ಸಲುವಾಗಿ ಸ್ಥಳೀಯ ನಗರಸಭೆ ಪುರಸಭೆ ಹಾಗೂ ಜಿಲ್ಲಾಧಿಕಾ ರಿಗಳಿಗೆ ಅಗತ್ಯ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ನೋಟಿಫಿಕೇಶನ್ ಮಾಡಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

೯೦ ಮೊಬೈಲ್ ವಾರಸುದಾರರಿಗೆ
ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಿಂದ ಸುಮಾರು ೧೦ ಲಕ್ಷ ಮೂಲ್ಯದ ೯೦ ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾಸುದಾರರಿಗೆ ನೀಡಲಾಗುತ್ತಿದೆ ಎಂದು ಎಸ್ಪಿ ಹೇಳಿದರು.

ರಾಜ್ಯದಲ್ಲಿ ಸಿಇಐಆರ್ ಪೋರ್ಟಲ್ ಉದ್ಘಾಟನೆಯಾದ ನಂತರ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು ೧೯೨೫ ಮೊಬೈಲ್ ಗಳು ಕಳವಾಗಿರುವ ಬಗ್ಗೆ ದೂರುಗಳು ದಾಖಲಾಗಿದ್ದು ಇಲ್ಲಿಯವರೆಗೆ ಸುಮಾರು ೨೩೮ ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದೆ.
ಕಳೆದ ೨೦೨೩ ಮೇ ೨೫ ರಂದು ೧೪೮ ಮೊಬೈಲ್ಗಳನ್ನು ಸಂಬಂಧ ಪಟ್ಟ ವಾರಸುದಾರರಿಗೆ ನೀಡಲಾಗಿದೆ. ಎಲ್ಲ ಮೊಬೈಲ್ ಗಳನ್ನು ವಿವಿಧ ಜಿಲ್ಲೆಗಳಿಂದ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದ್ದು, ಮೇ ೨೫ ರಿಂದ ಜೂನ್ ೨೧ರ ವರೆಗೂ ೯೦ ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದ್ದು ಜಾರ್ಖಂಡ್ ,ಕೇರಳ ತೆಲಂಗಾಣ ಹಾಗೂ ಇತರೆ ರಾಜ್ಯಗಳಿಂದಲೂ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದರು.

ಇಂದು ೯೦ ಮೊಬೈಲ್ ವಾರಸುದಾರರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಲೈಸೆನ್ಸ್ ಇಲ್ಲದ ಆಟೋಗಳಿಗೆ ಕಡಿವಾಣ
ನಗರದಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಬಾಡಿಗೆ ಆಟೋಗಳು ಇದ್ದು ಇವುಗಳಲ್ಲಿ ಈಗಾಗಲೇ ರೂ.೧೫೦೦ ಆಟೋಗಳಿಗೆ ಇಲಾಖೆಯಿಂದ ನಂಬರ್‌ಗಳನ್ನು ನೀಡಲಾಗಿದೆ. ಇನ್ನೂ ೫೦೦ ಆಟೋ ಗಳಿಗೆ ನಂಬರ್ ಹಾಕಬೇಕಿದ್ದು ಪರ್ಮಿಟ್ ಇಲ್ಲದ ಆಟೋಗಳನ್ನು ಬಾಡಿಗೆ ಹೊಡಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ, ಬಸ್ ಸ್ಟ್ಯಾಂಡ್ ಹಾಗೂ ರೈಲು ನಿಲ್ದಾಣ ದಲ್ಲಿ ಪ್ರೀಪೈಡ್ ಸೇವೆಯನ್ನು ಇನ್ನು ಕೆಲವೇ ದಿನಗಳಲ್ಲಿ ಆರಂಭಿಸಲಾಗುವುದು ಎಂದು ಎಸ್.ಪಿ ತಿಳಿಸಿದರು.
೧೬೦ ಪೊಲೀಸ್ ಸಿಬ್ಬಂದಿ ವರ್ಗಾವಣೆ

ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು ಎಎಸ್‌ಐ, ಎಚ್ ಸಿ, ಪಿ ಸಿ ಸೇರಿದಂತೆ ೧೬೦ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯಮಾನುಸಾರ ವರ್ಗಾವಣೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.

ಐದು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಆರೋಗ್ಯ ಸಮಸ್ಯೆ ಸೇರಿದಂತೆ ಇತರೆ ಮಾನದಂಡದಡಿ ಬರುವ ಸಿಬ್ಬಂದಿ ಗಳನ್ನು ವರ್ಗಾವಣೆ ಮಾಡಲಾಗಿಲ್ಲ; ಕಳೆದ ಬಾರಿಯೂ ೧೬೦ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳನ್ನು ಸಬ್ ಡಿವಿಷನ್ ಹಾಗೂ ಇತರೆ ಪೊಲೀಸ್ ಠಾಣೆಗಳಿಂದ ವರ್ಗಾ ವರ್ಗಿ ಮಾಡಲಾಗಿದೆ ಎಂದು ಹೇಳಿದರು.

ಸೈಬರ್ ಕ್ರೈಮ್: ೧೯೩೦ ಕರೆ ಮಾಡಿ
ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳಿಂದ ಸೈಬರ್ ವಂಚನೆಗೆ ಒಳಗಾದಲ್ಲಿ ಕೂಡಲೇ ೧೯೩೦ ಸಹಾಯವಾಣಿ ಸಂಖ್ಯೆಗೆ ದೂರನ್ನು ದಾಖಲಿಸಬಹುದಾಗಿದೆ. ಹಾಗೂ ವೆಬ್ ಪೋರ್ಟಲ್ https://cybercrime. gov.in ನಲ್ಲಿಯೂ ಸಹ ಸಾರ್ವಜನಿಕರು ದೂರನ್ನು ದಾಖಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು