News Karnataka Kannada
Monday, April 29 2024
ವಿಜಯಪುರ

ವಿಜಯಪುರಕ್ಕೂ ಎಂಟ್ರಿ ಕೊಟ್ಟ ಚಡ್ಡಿ ಗ್ಯಾಂಗ್

New Project 2024 01 11t172246.062
Photo Credit : News Kannada

ವಿಜಯಪುರ:  ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಜಿಲ್ಲೆ ವಿಜಯಪುರಕ್ಕೆ   ಖತರ್ನಾಕ್​ ಚಡ್ಡಿ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು,   ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಕಳೆದ ಕೆಲವು   ದಿನಗಳಿಂದ ವಿಜಯಪುರ ನಗರದಲ್ಲಿ   ಚಡ್ಡಿ ಗ್ಯಾಂಗ್ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದೆ. ಚಡ್ಡಿ ಧರಿಸಿ, ಮಾಸ್ಕ್ ಮತ್ತು ಮಫ್ಲರ್ ಹಾಕಿ ಗುಂಪುಗೂಡಿ ಕಳ್ಳತನ ಮಾಡಿದ ಈ ಗ್ಯಾಂಗ್​ನ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಇದೀಗ ಈ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಅಲರ್ಟ್ ಆಗಿರುವ ಪೊಲೀಸ್ ಇಲಾಖೆ ಸಾರ್ವಜನಿಕರನ್ನು ಎಚ್ಚರಗೊಳಿಸುವುದರ ಜೊತೆಗೆ ಚಡ್ಡಿ ಗ್ಯಾಂಗ್ ಪತ್ತೆಗೆ ವ್ಯಾಪಕ ಜಾಲ ಬೀಸಿದೆ. ಇದಿಷ್ಟೇ ಅಲ್ಲದೆ, ಆಟೋ, ವಾಟ್ಸ್​ಆ್ಯಪ್​ ಸಂದೇಶದ ಮೂಲಕ ಸಾರ್ವಜನಿಕರನ್ನು ಜಾಗೃತಗೊಳಿಸಲಾಗುತ್ತಿದೆ. ಇಂಥ ಚಡ್ಡಿ ಗ್ಯಾಂಗ್ ಕಂಡುಬಂದರೆ ಮೊ. 9480804200 ಅಥವಾ 112ಕ್ಕೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು