News Karnataka Kannada
Saturday, May 04 2024
ವಿಜಯಪುರ

ಗಣಪತಿ ಹಬ್ಬ ನಿರ್ಬಂಧಿಸಲು ಬಿಡುವುದಿಲ್ಲ: ಶಾಸಕ ಯತ್ನಾಳ

Yatnal 22082021
Photo Credit :

ವಿಜಯಪುರ: ‘ಕೋವಿಡ್‌ ನೆಪದಲ್ಲಿ ಗಣಪತಿ ಹಬ್ಬ, ಹಿಂದೂ ಆಚರಣೆಗಳ ಮೇಲೆ ನಿರ್ಬಂಧ ಹೇರಿದರೆ ವಿಜಯಪುರದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಭಾಳಾದ್ರ, ನನಗೆ ಗುಂಡು ಹೊಡೆಯಬಹುದು. ಹಾಗಾದರೆ, ಇಡೀ ಕರ್ನಾಟಕದ ತುಂಬಾ ಬೆಂಕಿ ಹತ್ತೈತಿ. ಸತ್ತರೂ ಹೆಸರು ತೆಗೆದುಕೊಂಡು ಹೋಗುವೆ’ ಎಂದು ಹೇಳಿದರು.

‘ಗಣಪತಿ ಹಬ್ಬ, ದೀಪಾವಳಿ, ಸಂಕ್ರಾಂತಿ ಮಾಡಬೇಡಿ ಎಂದು ನೀವೇ ಹೇಳಿದರೆ ಹೇಗೆ? ಉಳಿದವರಿಗೆ ಅನುವು ಮಾಡಿಕೊಟ್ಟು, ನಮಗೆ ಬೇಡ ಎಂದರೆ ನಡೆಯುವುದಿಲ್ಲ ಎಂದು ಬೊಮ್ಮಾಯಿ ಅವರಿಗೆ ಸ್ಪಷ್ಟಪಡಿಸಿದ್ದೇನೆ’ ಎಂದರು.

‘ಗಣಪತಿ ಹಬ್ಬದ ಆಚರಣೆಗೆ ಯಾರೂ ತೊಂದರೆ ಮಾಡಬಾರದು ಎಂದು ಸಿಎಂ ಆದೇಶಿಸಿದ್ದಾರೆ. ಹಬ್ಬವನ್ನಾಚರಿಸಲು ಯಾರೂ ಹೆದರಬೇಕಾಗಿಲ್ಲ’ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು