ಬೆಳಗಾವಿ: ಬೆಳಗಾವಿಯ ಬಾಂದುರಗಲ್ಲಿಯಲ್ಲಿ ನಿಷೇಧಿತ MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆಳವನಗಲ್ಲಿ ನಿವಾಸಿ ರಿಜ್ವಾನಾಖಾನ್ ಪಠಾಣ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಹಾಗೂ ಆತನಿಂದ 3 ಲಕ್ಷ 64 ಸಾವಿರ ಮೌಲ್ಯದ 34 ಗ್ರಾಂ ಎಂಡಿಎಂಎನ್ನು ಪೊಲೀಸರು ಜಪ್ತಿಮಾಡಿದ್ದಾರೆ.
ಬಗ್ಗೆ ಖಚಿತ ಮಾಹಿತಿ ಮೇರೆಗೆ ಟಿಳಕವಾಡಿ ಪೊಲೀಸರು ದಾಳಿ ನಡೆಸಿದ್ದಾರೆ.
ರಿಜ್ವಾನಾಖಾನ್ ಪಠಾಣ್ ಸಾರ್ವಜನಿಕವಾಗಿಯೇ ನಿಷೇಧಿತ ಕ್ರಿಸ್ಟಲ್ ಮೆಥಾಂಫೆಟಮೈನ್ ಮಾದಕ ವಸ್ತುವನ್ನ ಮಾರಾಟ ಮಾಡುತ್ತಿದ್ದ.
ಇನ್ನು ಬಂಧಿತ ಆರೋಪಿ ಇದನ್ನು ಎಲ್ಲಿಂದ ತಂದು ಮಾರಾಟ ಮಾಡುತ್ತಿದ್ದ ಎನ್ನುವ ಆಯಾಮದಲ್ಲಿ ತನಿಖೆ ಶುರುವಾಗಿದೆ. ಇದೇ ಮೊದಲ ಸಲ ಬೆಳಗಾವಿಯಲ್ಲಿ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ.
ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.