News Karnataka Kannada
Thursday, April 25 2024
ಕಲಬುರಗಿ

ಅಫಜಲಪುರ ಪುರಸಭೆಯ ಪೌರಕಾರ್ಮಿಕ ಮಹಿಳೆಯರಿಗೆ ಗೌರವ ಸಮರ್ಪಣೆ

ಆಶಾಕಿರಣ ಸೇವಾ ಸಂಸ್ಥೆ ಅಫಜಲಪೂರ ವತಿಯಿಂದ ಇಂದು ಅಫಜಲಪುರ ನಗರದ ಪುರಸಭೆಯ ಪೌರ ಕಾರ್ಮಿಕ ಮಹಿಳೆಯರ ಜೊತೆಗೂಡಿ ಪಟ್ಟಣದ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಿ ಪೌರಕಾರ್ಮಿಕ ಮಹಿಳೆಯರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು.
Photo Credit : News Kannada

ಅಫಜಲಪುರ: ಆಶಾಕಿರಣ ಸೇವಾ ಸಂಸ್ಥೆ ಅಫಜಲಪೂರ ವತಿಯಿಂದ ಇಂದು ಅಫಜಲಪುರ ನಗರದ ಪುರಸಭೆಯ ಪೌರ ಕಾರ್ಮಿಕ ಮಹಿಳೆಯರ ಜೊತೆಗೂಡಿ ಪಟ್ಟಣದ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಿ ಪೌರಕಾರ್ಮಿಕ ಮಹಿಳೆಯರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಎಸ್.ಮೇತ್ರಿ ,ಮಹಿಳೆಯ ಮೇಲೆ ಹುಡಿಕೆಮಾಡಿ ಪ್ರಗತಿಯನ್ನು ವೇಗಗೊಳಿಸಿ ಅನ್ನುವ ಘೋಷ ವಾಕ್ಯದಂತೆ ನಾವು ಹೆಣ್ಣುಮಕ್ಕಳು ಸಬಲರಾಗಿ ಸಫಲರಾಗಬೇಕು‌.,ನಾವು ಮಾಡುವ ಕಾಯಕ ಸಣ್ಣದೆ ಇರಲಿ‌ ದೊಡ್ಡದೆ ಇರಲಿ ನಮಗೆ ಸಾಧ್ಯವಾದಷ್ಟು ಮಾಡುತ್ತಾ ಬದುಕಲ್ಲಿ ಸ್ವಾವಲಂಬಿ ಆಗಬೇಕು ಎಂದರು.ನಮ್ಮ ಪ್ರಪಂಚವು ಇನ್ನೂ ಸಹಸ್ರಾರು ವರ್ಷಗಳ ಪುರುಷ ಪ್ರಾಬಲ್ಯದ ಶಕ್ತಿ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.

ಮಹಿಳೆಯರ ಹಕ್ಕುಗಳ ವಿರುದ್ದ ತೀವ್ರ ಹಿನ್ನಡೆಯೊಂದಿಗೆ ಪ್ರಗತಿಯು ಆಕ್ರಮಣದಲ್ಲಿದೆ.ನಮ್ಮ ಪ್ರಸ್ತುತ ದರದಲ್ಲಿ ಕಾನೂನು ಸಮಾನತೆಯು ಸುಮಾರು ಮುನ್ನೂರು ವರ್ಷಗಳಷ್ಟು ದೂರದಲ್ಲಿದೆ.ನಾವು ಹೆಚ್ಚು ವೇಗವಾಗಿ ಚಲಿಸಬೇಕು. ಅಂತರಾಷ್ಟ್ರೀಯ ಮಹಿಳಾ ದಿನದಂದು ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುವ ಮಹಿಳೆಯರು ಮತ್ತು ಹುಡುಗಿಯರೊಂದಿಗೆ ನಿಲ್ಲುತ್ತವೆ. ನಾವೆಲ್ಲರೂ ಪ್ರಗತಿಯನ್ನು ವೇಗಗೊಳಿಸಲು ಬದ್ದರಾಗೋಣ. ಮುಂಚೂಣಿಯಲ್ಲಿರುವ ಮಹಿಳಾ ಸಂಘಟನೆಗಳನ್ನು ನಾವು ಬೆಂಬಲಿಸಬೇಕು.ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ಮತ್ತು ಆರ್ಥಿಕತೆಗಳು, ಡಿಜಿಟಲ್ ತಂತ್ರಜ್ಞಾನಗಳು,ಹಾಗೂ ನಾಯಕತ್ವವನ್ನು ಹೆಚ್ಚಿಸಲು ನಾವು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ನಗರದ ಪ್ರತಿ ರಸ್ತೆಯ ಸ್ವಚ್ಚತೆಯ ಭಾರ ಹೊತ್ತು ಕೆಲಸ ಮಾಡುವ ನಮ್ಮ ಈ ಮಹಿಳಾ ಮಣಿಯರು ನಸುಕಿನ ನಾಲ್ಕುಗಂಟಗೆ ಎಂದು ರಸ್ತೆ ಸ್ವಚ್ಛ ಮಾಡುವ ಇವರಿಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.ಪ್ರತಿ ವರ್ಷ ಮಾರ್ಚ್ 8ರಂದು ಆಚರಿಸಲಾಗುವ ಅಂತರಾಷ್ಟ್ರೀಯ ಮಹಿಳಾ ದಿನವು ಇತಿಹಾಸದುದ್ದಕ್ಕೂ ಸ್ತ್ರೀವಾದಿ ತತ್ವಜ್ಞಾನಿಗಳು ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರರ ನಿರಂತರ ಪ್ರಯತ್ನಗಳನ್ನು ನೆನಪಿಟ್ಟುಕೊಳ್ಳಲು ಸಾಕ್ಷಿಯಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಗೌರಾಬಾಯಿ ಸುಲೇಕರ, ಮುಖ್ಯ ಅತಿಥಿಗಳಾಗಿ  ಮಲ್ಲಮ್ಮ ಕಲಶೇಟ್ಟಿ, ಕಮಲಾಬಾಯಿ ಗುಡ್ಡಡಗಿ, ಗಂಗಾ ವಿರಕ್ತಮಠ, ವಿದ್ಯಾವತಿ ಕಲಶೇಟ್ಟಿ, ಪ್ರತಿಭಾ ಮಹಿಂದ್ರಕರ್ ಹಾಗೂ ಪುರಸಭೆಯ ಪೌರಕಾರ್ಮಿಕ ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು