ಹಾವೇರಿ: ಹಾವೇರಿಯಲ್ಲೊಂದು ಆಘಾತಕಾರಿ ಘಟನೆ ಸಂಭವಿಸಿದೆ. ಹೆಣ್ಣುಮಗು ಜನಿಸಿತೆಂದು ತಂದೆಯೇ ತನ್ನ ಹಸುಗೂಸನ್ನು ಕಿಡ್ನಾಪ್ ಮಾಡಿ ಮಾರಾಟ ಮಾಡಲು ಯತ್ನಿಸಿದ್ದಾನೆ.
ಕಳೆದ 4 ದಿನಗಳ ಹಿಂದೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಆಸ್ಪತ್ರೆಯಿಂದ ಬಾಣಂತಿ ಗೀತಾ ಪತಿ ಸಿದ್ದಲಿಂಗಪ್ಪ ಹಸುಗೂಸನ್ನ ಕಿಡ್ನಾಪ್ ಮಾಡಿ ಮಾರಲು ಯತ್ನಿಸಿದ್ದಾನೆ. ವಿಷಯ ತಿಳಿದ ಪತ್ನಿ ಹಸುಗೂಸು ಸಮೇತ ಅಂಬುಲೆನ್ಸ್ ನಲ್ಲಿ ಎಸ್ಪಿ ಕಚೇರಿಗೆ ಆಗಮಿಸಿ ಪತಿ ವಿರುದ್ಧ ದೂರು ನೀಡಿದ್ದಾರೆ. ಮೊದಲನೇಯದು ಹೆಣ್ಣು ಮಗು, ಎರಡನೇಯದು ಹೆಣ್ಣು ಮಗು ಅಂತ ಸಿಟ್ಟಿಗೆದ್ದು ಈತ ಈ ಕೃತ್ಯ ಮಾಡಿದ್ದಾನೆ.
ಸದ್ಯ ಸಿದ್ದಲಿಂಗಪ್ಪ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.