ಹುಬ್ಬಳ್ಳಿ: ಮಹಿಳೆ ರಸ್ತೆ ದಾಟುತ್ತಿರುವಾಗ ಏಕಾಏಕಿ ಬಂದ ಲಾರಿ, ಮಹಿಳೆಯ ಕಾಲಿನ ಮೇಲೆಯೇ ಹಾಯ್ದು ಹೋದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದಿಂದ ಪ್ರಾದೇಶಿಕ ಬಿಆರ್ಟಿಎಸ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮಹಿಳೆ ರಸ್ತೆ ದಾಟಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದರು. ಆ ವೇಳೆ ವೇಗವಾಗಿ ಬಂದ ಲಾರಿ, ಮಹಿಳೆಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಮಹಿಳೆಯ ಕೈ- ಕಾಲಿಗೆ ತೀವ್ರ ಗಾಯವಾಗಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಅಲ್ಲೇ ಇದ್ದ ಸ್ಥಳೀಯರು ಆ ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ಬಂದ ಕಾಟನ್ ಮಾರ್ಕೆಟ್ ಟ್ರಾಫಿಕ್ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆ ಮಹಿಳೆ ಯಾರು ಎಂಬುದು ಇನ್ನೂ ತಿಳಿದು బందిల్ల.