ಧಾರವಾಡ: ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕರ ರಕ್ಷಣೆ

ಧಾರವಾಡ: ಬಾಲಕಾರ್ಮಿಕನನ್ನು ಗೃಹ ಕಾರ್ಮಿಕನಾಗಿ ಕೆಲಸಕ್ಕೆ ನೇಮಿಸಿಕೊಂಡಿರುವ ದೂರಿನನ್ವಯ ಹುಬ್ಬಳ್ಳಿಯ ಲಿಂಗರಾಜ ನಗರ ವ್ಯಾಪ್ತಿಯಲ್ಲಿ ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ಮನೆಯ ಮೇಲೆ ಹಠಾತ್ ದಾಳಿಯನ್ನು ಕಾರ್ಮಿಕ ಇಲಾಖೆಯಿಂದ ಕೈಗೊಳ್ಳಲಾಯಿತು.

ಈ ಸಮಯದಲ್ಲಿ ಮಗು ಕೆಲಸ ಮಾಡುತ್ತಿರುವುದು ಕಂಡು ಬಂದಿತು. ಇದು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಉಲ್ಲಂಘನೆಯಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಮತ್ತು 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ದಾಳಿಯಲ್ಲಿ ಸಿಕ್ಕಿರುವ ಬಾಲಕಾರ್ಮಿಕ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಸಹಾಯಕ ಕಾರ್ಮಿಕ ಆಯುಕ್ತರ ನಿರ್ದೇಶನದ ಮೇರೆಗೆ ಕೈಗೊಳ್ಳಲಾಗಿದೆ ಮತ್ತು ಈ ಕಾರ್ಯಾಚರಣೇಯ ನೇತೃತ್ವವನ್ನು ಮಾರಿಕಾಂಬಾ ಹುಲಕೋಟಿ ಕಾರ್ಮಿಕ ಅಧಿಕಾರಿ ಉಪ ವಿಭಾಗ-2, ಹುಬ್ಬಳ್ಳಿ ವಹಿಸಿಕೊಂಡಿದ್ದರು. ಈ ಪ್ರಕರಣವು ಅಶೋಕ ಓಡೆಯರ ಹಿರಿಯ ಕಾರ್ಮಿಕ ನಿರೀಕ್ಷಕರು 3ನೇ ವೃತ್ತ, ಹುಬ್ಬಳ್ಳಿ ಇವರ ಕಾರ್ಯವ್ಯಾಪ್ತಿಗೆ ಒಳಪಡುವುದರಿಂದ ಕೆಲಸಕ್ಕೆ ನೇಮಿಸಿಕೊಂಡ ಮನೆಯ ಮಾಲಿಕರ ವಿರುದ್ಧ ಪ್ರಕರಣವನ್ನು ದಾಖಲಿಸಲು ಕ್ರಮ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅಕ್ರಮ ಅಲ್ಲಾಪುರ, ಹಿರಿಯ ಕಾರ್ಮಿಕ ನಿರೀಕ್ಷಕರು, 2ನೇ ವೃತ್ತ, ಹುಬ್ಬಳ್ಳಿ, ಪೋಲಿಸ್ ಇಲಾಖೆಯ ಎಮ್.ಎಚ್. ಬಾರವಲಿ., ಎ.ಎಸ್.ಐ ಪುಷ್ಪಾ ವೈ ಶಾನವಾಡ್ ಡಬ್ಲ್ಯೂ.ಪಿ.ಸಿ., ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಬಸವರಾಜ ಪಂಚಾಕ್ಷರಿಮಠ್, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುಧಾ ಶಿರೋಡ್ಕರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವಿಶಾಲಾ ಹೊನವಾಡ್, ಇವರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು.

Sneha Gowda

Recent Posts

ಪ್ರಜ್ವಲ್‌ ರೇವಣ್ಣ ಪ್ರಧಾನಿ ಮೋದಿಯವರ ನಿಜವಾದ ಪರಿವಾರ: ಜಿಗ್ನೇಶ್‌ ಮೇವಾನಿ

'ಸುಮಾರು ಮೂರು ಸಾವಿರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌…

23 mins ago

ರಾಜು ಆಲಗೂರರಿಗೆ ಕುರುಬ ಸಮಾಜದ ಬೆಂಬಲ

ಕುರುಬ ಸಮಾಜ ಯಾವತ್ತೂ ನ್ಯಾಯದ ಪರವಾಗಿದೆ. ಹಾಗಾಗಿ ಯೋಗ್ಯ ಅಭ್ಯರ್ಥಿಯಾದ ರಾಜು ಆಲಗೂರರಿಗೆ ಬೆಂಬಲ ನೀಡುತ್ತದೆ ಎಂದು ಮಾಜಿ ಜಿಪಂ…

1 hour ago

ಹೊಸ ಕಥೆ ಮೂಲಕ ಮತ್ತೆ ಒಟಿಟಿಗೆ ಬರಲಿದೆ ಆ್ಯನಿಮೇಟೆಡ್ ಬಾಹುಬಲಿ – ಕ್ರೌನ್​ ಆಫ್​ ಬ್ಲಡ್​

ಬಾಕ್ಸ್​ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಿದ್ದ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಆ್ಯನಿಮೇಟೆಡ್​ ಸೀರಿಸ್​ ಬರುತ್ತಿದೆ. ಇದಕ್ಕೆ ‘ಬಾಹುಬಲಿ:…

1 hour ago

ಚುನಾವಣೆಯ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ಸಾಧ್ಯತೆ

ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಅವರಿಗೆ ಲೋಕಸಭಾ ಚುನಾವಣೆಯ  ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ನೀಡುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಸುಪ್ರೀಂ…

2 hours ago

ಹಜ್ ಯಾತ್ರಾರ್ಥಿಗಳಿಗೆ ಉಚಿತ ಲಸಿಕಾ ಕಾರ್ಯಕ್ರಮ

ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಜಿಲ್ಲಾ ವಕ್ಫ್ ಮಂಡಳಿ, ಜಿಲ್ಲಾಸ್ಪತ್ರೆ ಹಾಗೂ ತಾಜಿರಾನ್ ಮಸೀದಿ ಸಹಯೋಗದಲ್ಲಿ ನಗರದ…

2 hours ago

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಮಹಿಳೆಯರಿಂದ ವಿಶೇಷ ಪೂಜೆ, ಪ್ರಾರ್ಥನೆ

ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಹೆಮ್ಮೆಯ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ವಿಜಯಪುರ…

2 hours ago