News Karnataka Kannada
Saturday, May 04 2024
ಹುಬ್ಬಳ್ಳಿ-ಧಾರವಾಡ

ಕಾಂಗ್ರೆಸ್ಸಿಗೆ ಮೀಸಲಾತಿ ಹೆಚ್ಚಿಸಲು ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ: ಬಸವರಾಜ ಬೊಮ್ಮಾಯಿ‌

The Congress party is opposing reservation out of desperation.
Photo Credit : News Kannada

ಹುಬ್ಬಳ್ಳಿ: ಮೀಸಲಾತಿ ಹೆಚ್ಚಿಸುವ ರಾಜಕೀಯ ಇಚ್ಛಾಶಕ್ತಿ ಕಾಂಗ್ರೆಸ್ಸಿಗೆ ಇರಲಿಲ್ಲ, ಅವರದ್ದು ಕೇವಲ ಡೋಂಗಿತನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಮೀಸಲಾತಿ ವಿಚಾರ ಬಿಜೆಪಿಗೆ ತಿರುಗು ಬಾಣ ಆಗಲಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಅವರು ನಮ್ಮ ನಿರ್ಧಾರಗಳು ಕಾಂಗ್ರೆಸ್ ಗೆ ತಿರುಗು ಬಾಣ ಆಗಲಿದೆ. ಕಾಂಗ್ರೆಸ್ ಮಾಡದೆ ಇದ್ದುದನ್ನು ಬಿಜೆಪಿ ಮಾಡಿ ತೋರಿಸಿದೆ ಎಂದರು. ಇಷ್ಟು ದಿನದ ದೀನ ದಲಿತರನ್ನು ಕಾಂಗ್ರೆಸ್ ಮತ ಬ್ಯಾಂಕ್ ಮಾಡಿಕೊಂಡಿತ್ತು. ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಹತಾಶೆಯಿಂದ ಕಾಂಗ್ರೆಸ್ ಆರೋಪಿಸುತ್ತಿದೆ. ಇಷ್ಟು‌ದಿನ ಅವರು ಹೇಳಿಕೊಂಡು ಬಂದಿದ್ದು ಅವರಿಗೇ ತಿರುಗು ಬಾಣ ಆಗಲಿದೆ ಎಂದರು.

ಅಂತಿಮ ಪಟ್ಟಿ ಬಿಡುಗಡೆ: ರಾಜ್ಯ ಕೋರ್ ಕಮಿಟಿ ಸಭೆ ಆಗಿದ್ದು ಏಪ್ರಿಲ್ 8 ರಂದು ಸಭೆ ಸೇರಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಸ್ಟಾರ್ ಪ್ರಚಾರಕರು: ಸೆಲೆಬ್ರಿಟಿಗಳು ಬಿಜೆಪಿ‌ ಪರ‌ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ತೆಲಗು ಚಿತ್ರನಟ ಪವನ್ ಕಲ್ಯಾಣ್ ಅವರನ್ನು ಕೇಂದ್ರ ನಾಯಕರು ಭೇಟಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಾದು ನೋಡಿ ಎಂದರು.

ಜನ ತೀರ್ಮಾನ: ಕೊಲೆ ಆರೋಪಿ ವಿನಯ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಟಿಕೇಟ್ ನೀದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿನಯ್ ಕುಲಕರ್ಣಿ ಪ್ರಕರಣ ನ್ಯಾಯಾಲಯದಲ್ಲಿದೆ‌. ಕಾನೂನಾತ್ಮಕ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.  ಈ‌ ರೀತಿಯ ಪ್ರಕರಣಗಳಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ಪ್ರಕರಣದ ಹಂತ ಪರಿಶೀಲಿಸಿ ಟಿಕೇಟ್: ಅಪರಾಧ ಹಿನ್ನೆಲೆಯುಳ್ಳವರಿಗೆ ಬಿಜೆಪಿ ಟಿಕೆಟ್ ನೀಡಿರುವ ಬಗ್ಗೆ ಮಾತನಾಡಿ, ಕಾನೂನು ಬಹಳ‌ ಸ್ಪಷ್ಟವಾಗಿದೆ. ಪ್ರಕರಣಗಳು ವಿವಿಧ ಹಂತದಲ್ಲಿ ಇರುತ್ತವೆ. ಇದನ್ನೆಲ್ಲ ಗಮನಿಸಿ ಟಿಕೆಟ್ ನೀಡಲಾಗುವುದು ಎಂದರು.

ವರದಿ ಪರಿಶೀಲಿಸಿ ಟಿಕೆಟ್ ಹಂಚಿಕೆ: ಹಾಲಿ‌ ಶಾಸಕರಿಗೆ ಟಿಕೇಟ್ ಕೈ ತಪ್ಪುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಮೂರು ನಾಲ್ಕು ಹಂತದಲ್ಲಿ ಪರಿಶೀಲಿಸಿ ವರದಿ‌ ಪಡೆದುಕೊಳ್ಳಲಾಗಿದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುವುದು ಎಂದರು.

ವದಂತಿ: ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ಅದಕ್ಕೆ ಯಾರು ಕಿವಿಗೊಡಬಾರದು ಎಂದರು.

ನನಗೆ ಕೋಟಿಗಟ್ಟಲೆ ಅಣ್ಣತಮ್ಮಂದಿರು, ಬಂಧುಗಳು ಇದ್ದಾರೆ: ರಾಜ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಸರ್ಕಾರ ಉತ್ತಮ ಕೆಲಸ ಮಾಡಿದೆ.  ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಎಲ್ಲರೂ ಹೇಳುತ್ತಿ ದ್ದರು. ರಾಜಕೀಯ ವಲಯದಲ್ಲಿ ಇದನ್ನು ಮಾಡಬಾರದು ಎನ್ನುತ್ತಿದ್ದರು ಅದನ್ನು ಸರ್ಕಾರ ಮಾಡಿ ತೋರಿಸಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು