News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯಲ್ಲಿ ಸ್ಯಾನಿಟರಿ ನ್ಯಾಪಿನ್ ಮಾರಾಟ ಯಂತ್ರ ಉದ್ಘಾಟನೆ

Sanitary napkin vending machine inaugurated in Hubballi
Photo Credit : News Kannada

ಹುಬ್ಬಳ್ಳಿ : ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು ವಿಭಾಗಗಳ ವಾಪ್ತಿಯ 20 ಪ್ರಮುಖ ರೈಲು ನಿಲ್ದಾಣಗಳಲ್ಲಿ 20 ಸ್ಯಾನಿಟರಿ ನ್ಯಾಪಿನ್ ಮಾರಾಟ ಯಂತ್ರಗಳನ್ನು ಸ್ಥಾಪಿಸಲಾಗಿದೆ ಎಂದು ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ (SWRWWO) ಅಧ್ಯಕ್ಷೆ ಡಾ.ವಂದನಾ ಶ್ರೀವಾಸ್ತವ ಅವರು ಹೇಳಿದರು.

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅವರು ಸ್ಯಾನಿಟರಿನ್ಯಾಪ್‌ಕಿನ್ ವೆಂಡಿಂಗ್ ಮಷಿನ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳ ಅಡಿ SYSOPS ಕಂಪನಿಯು ನೈರುತ್ಯ ರೈಲ್ವೆಗೆ ಯಂತ್ರಗಳನ್ನು ನೀಡಲಾಗಿದ್ದು, ವಲಯದ ಮಹಿಳಾ ಕಲ್ಯಾಣ ಸಂಸ್ಥೆಯಿಂದ ಸ್ಯಾನಿಟರಿ ನ್ಯಾಪಿನ್‌ಗಳನ್ನು ನೀಡಲಾಗುತ್ತಿದೆ ಎಂದರು.

ರೈಲ್ವೆ ನಿಲ್ದಾಣದ ಮಹಿಳಾ ವೆಟಿಂಗ್ ಹಾಲ್‌ಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗಿದೆ. ಮಹಿಳೆಯರ ಸಬಲೀಕರಣಗೊಳಿಸಲು ಮತ್ತು ಮಹಿಳಾ ಪ್ರಯಾಣಿಕರ ಪ್ರಯಾಣ ಹೆಚ್ಚು ಸುಖಕರ ಹಾಗೂ ಆರಾಮದಾಯಕವಾಗಿಸಲು ಇದೊಂದು ಸಣ್ಣ ಪ್ರಯತ್ನವಾಗಿದೆ.

ಮಹಿಳೆಯರು ಐದು ರೂ. ನಾಣ್ಯವನ್ನು ಯಂತ್ರಕ್ಕೆ ಹಾಕಿ ಒಂದು ಪ್ಯಾಡ್ ತೆಗೆದುಕೊಳ್ಳಬಹುದು. ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಗೆ ಸ್ಯಾನಿಟರಿ ನ್ಯಾಪಿನ್‌ಗಳನ್ನು ಸುಲಭವಾಗಿ ಪಡೆಯಲು ವೆಂಡಿಂಗ್ ಮಷಿನ್‌ಗಳನ್ನು ಅಳವಡಿಸಲಾಗಿದೆ. ಈ ಉಪಕ್ರಮವು ಮುಟ್ಟಿನ ನೈರ್ಮಲ್ಯವನ್ನು ಉತ್ತೇಜಿಸುವ ಮತ್ತು ಮಹಿಳಾ ಪ್ರಯಾಣಿಕರ ಸುರಕ್ಷತಾ ಮತ್ತು ಸೌಕರ್ಯವನ್ನು ಖಾತ್ರಿಪಡಿಸುವ ಒಂದಾಗಿದೆ ಎಂದರು. ರೇಲ್ವೆ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು