News Karnataka Kannada
Saturday, May 04 2024
ಹುಬ್ಬಳ್ಳಿ-ಧಾರವಾಡ

26 ರಂದು ರಂಭಾಪುರಿ ಶ್ರೀ ಪೀಠ ದರ್ಶನ ಪ್ರವಾಸ: ಹೆಸರು ನೋಂದಣಿಗೆ ಆಗಸ್ಟ್ 21 ಕೊನೆಯ ದಿನ

Rambhapuri Sri Peetha Darshan tour on August 26: Last date for registration of names is August 21
Photo Credit : News Kannada

ಧಾರವಾಡ: ಪವಿತ್ರ ಶ್ರಾವಣ ಮಾಸ ನಿಮಿತ್ತ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಪಂಚಪೀಠ ದರ್ಶನ ಪ್ರವಾಸ ಕಾರ್ಯಕ್ರಮ ಅಂಗವಾಗಿ ವೀರಶೈವ ಲಿಂಗಾಯತರ ಪುಣ್ಯಕ್ಷೇತ್ರ ಬಾಳೆಹೊನ್ನುರು ರಂಭಾಪುರಿ ಶ್ರೀಪೀಠ ದರ್ಶನ ಪ್ರವಾಸವನ್ನು ಆಗಸ್ಟ್ 26 ರಂದು ಆಯೋಜಿಸಿದೆ.

ಆಗಸ್ಟ್ 26 ರಂದು ಮಧ್ಯಾಹ್ನ 1 ಗಂಟೆಗೆ ಧಾರವಾಡದಿಂದ ಹೊರಟು, ಸಂಜೆ ರಂಭಾಪುರಿ ಪೀಠ ತಲುಪಲಾಗುತ್ತದೆ. ಆಗಸ್ಟ್ 27 ಬೆಳಿಗ್ಗೆ ಶ್ರೀ ಪೀಠದಲ್ಲಿ ಶ್ರಾವಣ ಮಾಸದ ನಿಮಿತ್ತ ಮದ್ದ್ ರಂಭಾಪುರಿ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗವಹಿಸಿ, ಜಗದ್ಗುರುಗಳ ದರ್ಶನ ಆಶಿರ್ವಾದ ಪಡೆದು ಧಾರವಾಡಕ್ಕೆ ಮರಳಲಾಗುತ್ತದೆ.

ರಂಭಾಪುರಿ ಶ್ರೀ ಪೀಠ ದರ್ಶನಕ್ಕೆ ಆಗಮಿಸಲು ಇಚ್ಚಿಸುವವರು ಬರುವ ಆಗಸ್ಟ್ 21,2023 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಪ್ರವಾಸಕ್ಕೆ ಸರಕಾರಿ ಬಸ್ ವ್ಯವಸ್ಥೆ ಮಾಡಿದ್ದು, ಪ್ರತಿ ವ್ಯಕ್ತಿಗೆ ಸಂಚಾರ ದರ ರೂ. 850 ಗಳನ್ನು ನಿಗಧಿಗೊಳಿಸಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗಾಗಿ ಮೊಬೈಲ್ ಸಂಖ್ಯೆ: 96632 51969, 9538076619, 94825 53883, 63601 15512 ಸಂಪರ್ಕಿಸಬಹುದೆಂದು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು